ಕೊರೋನಾ ಹಾವಳಿ: 2 ವರ್ಷಗಳ ನಂತರ ಕಾಣಿಸಿಕೊಂಡ ಬೌದ್ಧ ಗುರು ದಲೈ ಲಾಮಾ!

Prasthutha|

ಶಿಮ್ಲಾ: ಕೊರೋನಾ ಸಾಂಕ್ರಮಿಕ ಇಡೀ ಜಗತ್ತನ್ನೇ ಅಲ್ಲೊಲ ಕಲ್ಲೋಲ ಮಾಡಿ ಜನರು ಪರಸ್ಪರ ಸಂಪರ್ಕ ಮಾಡುವುದು ಕಡಿಮೆಯಾಗಿತ್ತು. ಸುಮಾರು ಎರಡು ವರ್ಷಗಳಕಾಲ ಬೌದ್ಧ ಧರ್ಮ ಗುರು ದಲೈ ಲಾಮಾ ಕಾಣಿಸಿಕೊಂಡಿರಲಿಲ್ಲ.ಇದೀಗ ಕೊರೊನಾ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

- Advertisement -

ನಂತರ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು. ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ ಬೋಧನೆಯನ್ನು ನೀಡಿದರು. ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



Join Whatsapp