ಭಾರತದಲ್ಲೇ ಉಳಿಯಲು ಬಯಸುತ್ತೇನೆಂದ ದಲಾಯಿ ಲಾಮ : ಕಾರಣವೇನು ಗೊತ್ತೇ?

Prasthutha|

ಬೀಜಿಂಗ್: ಟಿಬೆಟ್ ಮೂಲದ ಭೌದ್ಧ ಧರ್ಮದ ಆಧ್ಯಾತ್ಮಿಕ ನಾಯಕ ದಲಾಯಿ ಲಾಮ ಭಾರತದಲ್ಲೇ ಉಳಿಯಲು ಬಯಸುತ್ತೇನೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

- Advertisement -

ತೈವಾನ್ ಭೇಟಿ ನೀಡುವ ಕುರಿತು ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ವರದಿಗಾರರಿಗೆ ಪ್ರತಿಕ್ರಿಯಿಸುತ್ತಾ “ತೈವಾನ್ ಮತ್ತು ಚೀನಾದ ಪ್ರಮುಖ ಭೂಭಾಗದ ನಡುವಿನ ಸಂಬಂಧಗಳು ಸಾಕಷ್ಟು ಸೂಕ್ಷ್ಮವಾಗಿರುವುದರಿಂದ ಭಾರತದಲ್ಲೇ ಉಳಿಯಲು ಆದ್ಯತೆ ನೀಡುತ್ತೇನೆ” ಎಂದು ತಿಳಿಸಿದರು.

ಈ ಮಧ್ಯೆ ಚೀನಾದ ನಾಯಕರನ್ನು ಟೀಕಿಸಿದ ದಲಾಯಿ ಲಾಮ “ ವಿವಿಧ ಸಂಸ್ಕೃತಿಗಳ ವೈವಿಧ್ಯಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಜನಾಂಗೀಯ ತಾರತಮ್ಯ ನೀತಿಯನ್ನು ಅಳವಡಿಸಿದೆ ಎಂದು ದೂರಿದರು. ಟಿಬೆಟ್ ಮತ್ತು ಕ್ಸಿನ್ ಜಿಯಾಂಗ್ ಗೆ ಸಂಬಂಧಿಸಿದಂತೆ ಟಿಬೆಟ್ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ್ದರೆ, ಚೀನಿ ಕಮ್ಯೂನಿಸ್ಟ್ ನಾಯಕರು ವಿಭಿನ್ನ ಸಂಸ್ಕೃತಿಗಳ ವೈವಿಧ್ಯತೆಯನ್ನು ಅರ್ಥೈಸುವಲ್ಲಿ ವೈಫಲ್ಯವಾಗಿದೆ ಎಂದು ವಿಷಾಧಿಸಿದರು.

- Advertisement -

ಮಾತ್ರವಲ್ಲ ತೈವಾನ್ ಭೇಟಿಯ ನಡುವೆ ಚೀನಾದ ನಾಯಕ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಮಾತುಕತೆ ನಡೆಸುವ ಯಾವುದೇ ಯೋಜನೆ ನನ್ನ ಮುಂದಿಲ್ಲ ಎಂದು ತಿಳಿಸಿದರು.

Join Whatsapp