ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್ ಸಾಲಗಾರ..!

Prasthutha|

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

- Advertisement -

ಸ್ಥಿರ ಮತ್ತು ಚರಾಸ್ತಿಯ ಮೌಲ್ಯದ 75% ದಷ್ಟು ಸಾಲವನ್ನು ಹೊಂದಿರುವುದಾಗಿ ಪದ್ಮರಾಜ್ ರಾಮಯ್ಯ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪದ್ಮರಾಜ್ ರಾಮಯ್ಯ ಒಬ್ಬರದ್ದೇ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೊತ್ತ 1,48,01,445 ರೂಪಾಯಿ ಇದೆ. ಇವರ ಸ್ಥಿರ ಆಸ್ತಿಯ ಒಟ್ಟು ಮೊತ್ತ 83,10,000 ರೂಪಾಯಿ ಇದ್ದರೆ, ಚರಾಸ್ತಿಯ ಒಟ್ಟು ಮೊತ್ತ 64,91,045 ರೂಪಾಯಿ ಇದೆ. ಆದರೆ, ಇವರು 1,26,50,000 ರೂ. ಸಾಲವನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. 30 ಲಕ್ಷ ರೂಪಾಯಿ ಮೌಲ್ಯದ ಕಾರು ಲೋನ್ ಸೇರಿ ಇತರೆ ಸಾಲಗಳ ಮೌಲ್ಯ ಕೋಟಿ ರೂಪಾಯಿ ದಾಟುತ್ತದೆ. ಅಂದರೆ ಸ್ಥಿರ ಮತ್ತು ಚರಾಸ್ತಿ ಮೌಲ್ಯದ ಶೇ. 75ರಷ್ಟು ಸಾಲ ಹೊಂದಿದ್ದಾರೆ.

- Advertisement -

ಪದ್ಮರಾಜ್ ರಾಮಯ್ಯ ಅವರ ಪತ್ನಿಯ ಚರಾಸ್ತಿಯ ಒಟ್ಟು ಮೊತ್ತ 35,36,141 ರೂಪಾಯಿ ಇದ್ದು, ಒಟ್ಟಾರೆ ಆಸ್ತಿ ಮೌಲ್ಯ 1,83,37,586 ರೂಪಾಯಿ ಇದೆ.

ಮಂಗಳೂರಿನ ಎಸ್​​​ಡಿಎಂ ಕಾಲೇಜಿನಲ್ಲಿ ಬಿಎ.ಎಲ್​​ಎಲ್​ಬಿ ಪದವಿ ಶಿಕ್ಷಣವನ್ನು ಪದ್ಮರಾಜ್​ ಪಡೆದುಕೊಂಡಿದ್ದಾರೆ.

Join Whatsapp