ಸಾಮರಸ್ಯಕ್ಕೆ ಹೆಸರುವಾಸಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ಕುಲಗೆಡಿಸಿದೆ: ಮಧು ಬಂಗಾರಪ್ಪ

Prasthutha|

ಮಂಗಳೂರು: ಸಾಮರಸ್ಯ ಮತ್ತು ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ಕುಲಗೆಡಿಸಿದ್ದು, ಇದನ್ನು ಹಳಿಗೆ ತರಲು ಕಾಂಗ್ರೆಸ್ ಪ್ರಯತ್ನಿಸಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ತಿಳಿಸಿದರು.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲೆಡೆ ಕಾಂಗ್ರೆಸ್ ಪಕ್ಷವು ಚಿಂತನ ಮಂಥನವನ್ನು ಯಶಸ್ವಿಯಾಗಿ ನಡೆಸಿದೆ. ಈಗ ಜಿಲ್ಲೆಯಲ್ಲೂ ನಡೆಸಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ನನ್ನ ತಂದೆ ಸಾರೇಕೊಪ್ಪ ಬಂಗಾರಪ್ಪನವರು ನಾನಾ ಪಕ್ಷ ಕಟ್ಟಿದವರು ಮತ್ತು ನಾನಾ ಪಕ್ಷಗಳಲ್ಲಿ ಇದ್ದವರು. ಬಂಗಾರಪ್ಪ ನವರ ಅಭಿಮಾನಿಗಳು ಕರಾವಳಿ ಮತ್ತು ತುಳುನಾಡಿನಲ್ಲಿ ತುಂಬ ಜನರಿದ್ದಾರೆ. ಆದರೆ ಅವರು ಬಂಗಾರಪ್ಪನವರ ಹಿಂದೆ ಬಿಜೆಪಿಗೆ ಹೋದವರು ವಾಪಸು ಬಂದಿಲ್ಲ. ಅವರನ್ನು ಮತ್ತೆ ಸಂಪಾದಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.

- Advertisement -

ಭಾರತೀಯ ಜನತಾ ಪಕ್ಷವನ್ನು ಬ್ರಿಟಿಷ್ ಜನತಾ ಪಕ್ಷ ಎಂದು ಹೇಳಬಹುದು. ಅಂಬೇಡ್ಕರ್ ರ ಸಂವಿಧಾನ ಬದಲಿಸುವ, ಪಠ್ಯಗಳಲ್ಲಿ ಇತಿಹಾಸ ತಿರುಚುವ ಬಿಜೆಪಿ ಕಾರ್ಯಕ್ರಮಗಳು ಜ‌ನದ್ರೋಹಿ ಎಂದು ಮಧು ಹೇಳಿದರು.

ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ನೀಡಿದರು. ಆಶ್ರಯ, ಆರಾಧನಾ ಇತ್ಯಾದಿ ಕಾರ್ಯಕ್ರಮಗಳು, ಭೂ ಸುಧಾರಣೆ. ಹೀಗೆ ಕಾಂಗ್ರೆಸ್ ಕೊಡುಗೆ ನೂರಾರು. ಬಿಜೆಪಿಯದು ಇಂತಹ ಕೊಡುಗೆಗಳೇನೂ ಇದ್ದರೆ ಅದು ಸೊನ್ನೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿ ಆರಂಭಿಸಿದರು. ಅದನ್ನು ವಿಧಾನ ಸಭೆಯಲ್ಲಿ ಎತ್ತಿ ಹೇಳಿದವನು ನಾನು ಎಂದು ಮಧು ಬಂಗಾರಪ್ಪ ಹೇಳಿದರು.

ನಾಟಕ ಪ್ರದರ್ಶನದ ಸ್ಥಳಕ್ಕೆ ಹೋಗಿ ಸಂಘ ಪರಿವಾರದವರು ಗಲಾಟೆ ಮಾಡಿ ಕಲೆಗೆ ಅಪಚಾರ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಆ ಜನವಿರೋಧಿ ಸರಕಾರ ಇಳಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ತೆರಬೇಕಾಗಿದೆ. ಇದಕ್ಕಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಬಿಜೆಪಿಯದು ಇತರ ಧಾರ್ಮಿಕ ದಮನ ನೀತಿ. ಧ್ವನಿವರ್ಧಕ ಇತ್ಯಾದಿ ತೆಗೆಸಿದ್ದರಲ್ಲಿ ಅದನ್ನು ಕಾಣಬಹುದು. ಧಾರ್ಮಿಕ ಸಾಮರಸ್ಯದ ದಕ್ಷಿಣ ಕನ್ನಡ ಜಿಲ್ಲೆಯು ಬಿಜೆಪಿಯಿಂದ ಕುಲಗೆಟ್ಟಿದೆ. ಅದನ್ನು ಸರಿಪಡಿಸುವ ವಿಶ್ವಾಸ ನಮ್ಮದು ಎಂದು ಮಧು ಬಂಗಾರಪ್ಪ ಹೇಳಿದರು.



Join Whatsapp