ದಕ್ಷಿಣ ಕನ್ನಡ: ಒಂದಂಕಿಗಿಳಿದ ಕೋವಿಡ್ ಸಕ್ರಿಯ ಪ್ರಕರಣ; ಇಂದು ಮತ್ತೆ ಶೂನ್ಯ ಸಾಧನೆ

Prasthutha|

ಮಂಗಳೂರು: ಕೋವಿಡ್ ಮೂರನೆ ಅಲೆ ತೀವ್ರತೆ ಕುಸಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಒಂದಂಕಿಗಿಳಿದಿದೆ. ಕೋವಿಡ್ ಮೊದಲನೇ ಅಲೆ ಆರಂಭದ ಬಳಿಕ ಮೊದಲ ಬಾರಿಗೆ ಸಕ್ರಿಯ ಕೋವಿಡ್ ಪ್ರಕರಣ ಒಂದಂಕಿಗಿಳಿದಿದ್ದು ಕೇವಲ ಒಂಬತ್ತು ಜನರಷ್ಟೇ ಕೋವಿಡ್ ಬಾಧಿತರಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿರುವುದಾಗಿ ಜಿಲ್ಲಾಡಳಿತವು ತಿಳಿಸಿದೆ

- Advertisement -

ಕಳೆದ 48 ಗಂಟೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಜೊತೆಗೆ, ಇಂದು ಓರ್ವ ಸೋಂಕಿತ ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ ಪರಿಣಾಮ ಕೋವಿಡ್ ಸಕ್ರಿಯ ಪ್ರಕರಣ ಒಂಬತ್ತಕ್ಕಿಳಿದಿದೆ.

ಕೋವಿಡ್ ಪ್ರಕರಣ ಶೂನ್ಯವಾಗಿರುವುದರಿಂದ ಪಾಸಿಟಿವಿಟಿ ದರವೂ ಶೂನ್ಯ ಸಾಧಿಸಿದೆ.

- Advertisement -

ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ಅಲೆಗಳಲ್ಲಿ 1,35,480 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರೆ, ಇದರಲ್ಲಿ 1,850 ಮಂದಿ ಸಾವನ್ನಪ್ಪಿದ್ದರು. 1,33,621 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.   

Join Whatsapp