ಮುಂಬೈ: ಆರ್ ಸಿಬಿಗೆ ಆಯ್ಕೆಯಾದ ಆರಂಭದ ದಿನಗಳಲ್ಲಿ ತಮಗಾದ ಅವಮಾನಗಳನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನೆನಪು ಮಾಡಿಕೊಂಡಿದ್ದಾರೆ.
ಕೊಹ್ಲಿ ಮೊದಲ ಸೀಸನ್ ನಲ್ಲಿ 15 ಸರಾಸರಿಯಲ್ಲಿ ಕೇವಲ 165 ರನ್ ಗಳಿಸಿದ ನಂತರ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲು ಒಂದು ಡಕೋಟ ಓಮ್ನಿ ಕಾರನ್ನು ಕಳುಹಿಸಿದ್ದರು. ಉಳಿದ ಆಟಗಾರರಿಗೆ ಎಸಿ ಕಾರುಗಳನ್ನು ಕಳುಹಿಸಲಾಗಿತ್ತು. ಅಲ್ಲದೆ ಐಪಿಎಲ್ ನ ಮೊದಲ ಸೀಸನ್ ಗಳಲ್ಲಿ ಅವರ ಸಂಭಾವನೆ ಕೇವಲ 12 ಲಕ್ಷ ರೂ. ಎಂದು ಕೊಹ್ಲಿ ಪ್ರಸ್ತಾಪಿಸಿದ್ದಾರೆ.
ಆರ್ ಸಿಬಿ ಪರ ಭರ್ಜರಿ ರನ್ ಗಳಿಸಿದ ಕೊಹ್ಲಿ ನಾಯಕತ್ವದಲ್ಲಿ ತಂಡ ಒಂದೂ ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ತಮ್ಮ ಐಪಿಎಲ್ ವೃತ್ತಿಜೀವನದ ಆರಂಭದಿಂದಲೂ 15 ಸೀಸನ್ ಗಳಲ್ಲಿ ಆರ್ ಸಿಬಿಯನ್ನು ಪ್ರತಿನಿಧಿಸಿರುವ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಆಟಗಾರ ಎಂಬ ದಾಖಲೆಯನ್ನು ಕೂಡ ಮಾಡಿದ್ದಾರೆ.