ದ.ಕ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಕಾಲೇಜುಗಳು ಯಾಕೆ ಇಲ್ಲ?: ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ

Prasthutha|

ಮಂಗಳೂರು: ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ 92.12 ಶೇ. ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿರುವ ಬುದ್ಧಿವಂತರ ಜಿಲ್ಲೆ ಎಂದೇ ಪ್ರಖ್ಯಾತಿ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಕಾಲೇಜುಗಳು ಯಾಕೆ ಇಲ್ಲ ಎಂದು ಮುಸ್ಲಿಂ ಕೋಡಿನೇಷನ್ ಸಮಿತಿಯ ಅಧ್ಯಕ್ಷತ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ ಪ್ರಶ್ನಿಸಿದ್ದಾರೆ.

- Advertisement -

ಒಂದು ಕಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾ ಆದರೆ, ಮತ್ತೊಂದು ಕಡೆ ಶಿಕ್ಷಣ ಮಾಫಿಯಾ ಕಾರ್ಯಾಚರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಲಕ್ಷ ಲಕ್ಷ ಶುಲ್ಕ ರೂ. ತಡೆಗೋಡೆಯಾಗಿ
ಸಾವಿರಾರು ಬಡ, ಮದ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ನನಸಾಗುವುದಾದರೂ ಹೇಗೆ? ಅಂತಹ ಮಕ್ಕಳ ಭವಿಷ್ಯವೇನು ಎಂದು ಪ್ರಶ್ನಿಸಿದ ದಾರಿಮಿ,
ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಹಾಗೆ ನಮಗೂ ಸರ್ಕಾರಿ ವಿದ್ಯಾಸಂಸ್ಥೆಗಳು ಬೇಕು, ಇದು ನಮ್ಮ ಹಕ್ಕು ಎಂದು ಆಗ್ರಹಿಸಿದ್ದಾರೆ.

- Advertisement -

ಅಧ್ಯಕ್ಷರು ಮುಸ್ಲಿಂ ಕೋಡಿನೇಷನ್ ಸಮಿತಿ



Join Whatsapp