ದ.ಕ. ಜಿಲ್ಲೆಯಲ್ಲಿ 770 ಸರಕಾರಿ ಬಸ್ಸು ಸಂಚಾರ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Prasthutha|

ಬಂಟ್ವಾಳ: ಕೆಎಸ್‌ಆರ್‌ಟಿಸಿಯ ಮಂಗಳೂರು ಹಾಗೂ ಪುತ್ತೂರು ವಿಭಾಗಗಳನ್ನು ಒಳಗೊಂಡಂತೆ ದ.ಕ.ಜಿಲ್ಲೆಯ ಘಟಕಗಳಲ್ಲಿ ಒಟ್ಟು 770 ಬಸ್ಸುಗಳಿದ್ದು, ಅವುಗಳು 397 ರೂಟ್‌ಗಳಲ್ಲಿ 3,131 ಟ್ರಿಪ್‌ಗಳನ್ನು ಮಾಡುತ್ತಿವೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

- Advertisement -

ಅವರು ವಿಧಾನಸಭಾ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಪ್ರಶ್ನೆಗೆ ಉತ್ತರಿಸಿ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಸಂಬಂಧಿಸಿ ಮಂಗಳೂರು ಘಟಕ-1ರಲ್ಲಿ 127 ಬಸ್ಸುಗಳು 39 ರೂಟ್‌ಗಳಲ್ಲಿ 376 ಟ್ರಿಪ್‌, ಘಟಕ 2ರಲ್ಲಿ 94 ಬಸ್ಸುಗಳು 25 ರೂಟ್‌ಗಳಲ್ಲಿ 88 ಟ್ರಿಪ್‌, ಘಟಕ-3ರಲ್ಲಿ 142 ಬಸ್ಸುಗಳು 54 ರೂಟ್‌ಗಳಲ್ಲಿ 653 ಟ್ರಿಪ್‌, ಪುತ್ತೂರು ವಿಭಾಗಕ್ಕೆ ಸಂಬಂಧಿಸಿ ಪುತ್ತೂರು ಘಟಕದಲ್ಲಿ 125 ಬಸ್ಸುಗಳು 96 ರೂಟ್‌ಗಳಲ್ಲಿ 716 ಟ್ರಿಪ್‌, ಧರ್ಮಸ್ಥಳದಲ್ಲಿ 128 ಬಸ್ಸುಗಳು 52 ರೂಟ್‌ಗಳಲ್ಲಿ 419 ಟ್ರಿಪ್‌, ಬಿ.ಸಿ.ರೋಡಿನಲ್ಲಿ 92 ಬಸ್ಸುಗಳು 75 ರೂಟ್‌ಗಳಲ್ಲಿ 522 ಟ್ರಿಪ್‌ ಹಾಗೂ ಸುಳ್ಯದಲ್ಲಿ 62 ಬಸ್ಸುಗಳು 75 ರೂಟ್‌ಗಳಲ್ಲಿ 522 ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ ಎಂದು ಸಚಿವರು ವಿವರಿಸಿದ್ದಾರೆ.