ಶ್ರೀನಗರ: ಎಲ್ಪಿಜಿ ಸಿಲಿಂಡರ್ ಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಅವರ ಮಗು ಸಜೀವ ದಹನವಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನಕೋಟೆ ಉಪವಿಭಾಗದ ಚಂದಿಮಾರ್ಹ್ ಗ್ರಾಮದಲ್ಲಿ ನಡೆದಿದೆ.
ಹಮೀದಾ ಬೇಗಂ(40) ಮತ್ತು ಅಕಿಬ್ ಅಹ್ಮದ್(4) ಮೃತರು. ಮೃತ ಮಹಿಳೆಯ ಪತಿ ಮತ್ತು ಇತರ ಇಬ್ಬರು ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಏನೆಂದರೆ, ಘಟನೆಯಲ್ಲಿ ಕನಿಷ್ಠ ಒಂದು ಡಜನ್ ಜಾನುವಾರುಗಳು ಸಹ ಸಾವನ್ನಪ್ಪಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಹನ್ನೆರಡು ಸಾಕು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಸುರನ್ಕೋಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ತನ್ವೀರ್ ಜೀಲಾನಿ ಅವರು ಹೇಳಿದ್ದಾರೆ.