ಜಖೌ: ಬಿಪೊರ್ ಜಾಯ್ ಚಂಡಮಾರುತವು ಗುಜರಾತ್ ಕರಾವಳಿಯಿಂದ 200 ಕಿಲೋ ಮೀಟರ್ ದೂರದಲ್ಲಿದ್ದು, ಇಂದು ಸಂಜೆ ಕರಾವಳಿಗೆ ಅಪ್ಪಳಿಸಲಿದೆ.
ಈ ಹಿನ್ನೆಲೆಯಲ್ಲಿ ಕಛ್ ಕಡಲತೀರದಿಂದ 10 ಕಿ.ಮೀ ಪ್ರದೇಶಗಳಲ್ಲಿನ, 120 ಹಳ್ಳಿಗಳ 74,000 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅತ್ಯಂತ ತೀವ್ರ’ಸ್ವರೂಪ ಪಡೆದುಕೊಂಡಿರುವ ಬಿಪೊರ್ಜಾಯ್ ಜಖೌ ಬಂದರಿನ ಬಳಿ ಭೂಪ್ರದೇಶಕ್ಕೆ ಅಪ್ಪಳಿಸಲಿದೆ. ಗಾಳಿಯ ವೇಗ ಗಂಟೆಗೆ ಗರಿಷ್ಠ 150 ಕಿಲೋಮೀಟರ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ವೇಳೆ ಭಾರಿ ಗಾಳಿ, ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.