ಸೈಕ್ಲಿಂಗ್ ವೇಳೆ ಮರಕ್ಕೆ ಡಿಕ್ಕಿ: ವೈದ್ಯ ವಿದ್ಯಾರ್ಥಿನಿ ಸಾವು

Prasthutha|

ಕಾರವಾರ: ಪ್ರವಾಸಕ್ಕೆ ಬಂದಿದ್ದ ಛತ್ತೀಸ್ ಗಡ ಮೂಲದ ವೈದ್ಯ ವಿದ್ಯಾರ್ಥಿಯೊಬ್ಬಳು ಸೈಕ್ಲಿಂಗ್ ಮಾಡುವಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ದಾಂಡೇಲಿಯ ಬಿರಂಪಾಲಿ ಬಳಿ ನಡೆದಿದೆ.

- Advertisement -

ಛತ್ತೀಸ್ ಗಢದ ದೇವಿಕಾ ಸಂಜಯ್ ವಾಸವಣೆ (25) ಮೃತಪಟ್ಟವರು. ವೈದ್ಯ ವಿದ್ಯಾರ್ಥಿನಿಯಾಗಿದ್ದ ಆಕೆಯು ಧಾರವಾಡಕ್ಕೆ ಸೆಮಿನಾರ್ಗೆ ಆಗಮಿಸಿದ್ದರು. ರಜಾ ಇರುವ ಹಿನ್ನೆಲೆಯಲ್ಲಿ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದರು.

ದಾಂಡೇಲಿಯಲ್ಲಿ ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರ ಜತೆ ಸಂಜಯ್ ತಂಗಿದ್ದರು. ಈ ವೇಳೆ ಸೈಕ್ಲಿಂಗ್ ಮಾಡುವಾಗ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಯುವತಿಯ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಮೂಗಿನಿಂದ ರಕ್ತಸ್ರಾವವಾಗಿತ್ತು. ಪರಿಣಾಮ, ಯುವತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ದಾಂಡೇಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp