ಅನಾಮಿಕ ಸೈಬರ್ ದಾಳಿ : ಏರ್ ಇಂಡಿಯಾದ 45 ಲಕ್ಷದ ಪ್ರಯಾಣಿಕರ ವೈಯುಕ್ತಿಕ ಮಾಹಿತಿ ಸೋರಿಕೆ !

Prasthutha|

ಮುಂಬಯಿ, ಮೇ.22 : ಪ್ರಯಾಣಿಕರ ಸೇವೆ ವ್ಯವಸ್ಥೆ ಒದಗಿಸುವ ‘ಸಿಟಾ’ ಮೇಲೆ ನಡೆದ ಅತ್ಯಾಧುನಿಕ ಸೈಬರ್ ದಾಳಿಯಿಂದ  ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಸರ್ವರ್ ನಿಂದ ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಕಳೆದ 2011ರ ಆಗಸ್ಟ್ 26ರಿಂದ 2021ರ ಫೆಬ್ರವರಿ 3ರವರೆಗೆ ಏರ್ ಇಂಡಿಯಾದ ಪ್ರಯಾಣಿಕರ ಸೇವೆ ವ್ಯವಸ್ಥೆ ಒದಗಿಸುವ ‘ಸಿಟಾ’ ಮೇಲೆ ನಡೆದ ಅತ್ಯಾಧುನಿಕ ಸೈಬರ್ ದಾಳಿಯಿಂದ 45 ಲಕ್ಷ ಪ್ರಯಾಣಿಕರ  ದಾಖಲೆಗಳ ಸೋರಿಕೆಯಾಗಿದೆ.

- Advertisement -

ನಾವು ಮತ್ತು ನಮ್ಮ ಡೇಟಾ ಪ್ರೊಸೆಸರ್ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು  ಪ್ರಯಾಣಿಕರು ತಮ್ಮ ವೈಯಕ್ತಿಕ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವಲ್ಲೆಲ್ಲಾ ಪಾಸ್‌ವರ್ಡ್‌ಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಧಿವಿಜ್ಞಾನ ವಿಶ್ಲೇಷಣೆಯ ಮೂಲಕ ಅತ್ಯಾಧುನಿಕತೆಯ ಮಟ್ಟ ಮತ್ತು ವ್ಯಾಪ್ತಿಯನ್ನು ಕಂಡುಹಿಡಿಯಲಾಗುತ್ತಿದೆ. ಘಟನೆಯ ನಂತರ ವ್ಯವಸ್ಥೆಯೊಳಗೆ ಯಾವುದೇ ಅನಧಿಕೃತ ಚಟುವಟಿಕೆ ಪತ್ತೆಯಾಗಿಲ್ಲ ಎಂದು ಸಿಟಾ ದೃಢಪಡಿಸಿದೆ.

ಏರ್ ಇಂಡಿಯಾವು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ನಿಯಂತ್ರಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಜವಾಬ್ದಾರಿಗಳಿಗೆ ಅನುಗುಣವಾಗಿ ಘಟನೆಯ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.



Join Whatsapp