ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸಿ.ವಿ.ಆನಂದ ಬೋಸ್ ಪ್ರಮಾಣ ವಚನ ಸ್ವೀಕಾರ

Prasthutha|

ಕೋಲ್ಕತ್ತಾ : ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ಸಿ.ವಿ. ಆನಂದ ಬೋಸ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

- Advertisement -

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇತರ ರಾಜ್ಯ ಸಚಿವರು ಮತ್ತು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು ಪ್ರಮಾಣ ವಚನ ಬೋಧಿಸಿದರು.

1977 ರ ಬ್ಯಾಚ್ನ ನಿವೃತ್ತ ಕೇರಳ ಕೇಡರ್ ಐಎಎಸ್ ಅಧಿಕಾರಿ ಬೋಸ್ ಅವರನ್ನು ನವೆಂಬರ್ 17 ರಂದು ಪಶ್ಚಿಮ ಬಂಗಾಳದ ಹೊಸ ರಾಜ್ಯಪಾಲರಾಗಿ ನೇಮಕಮಾಡಲಾಗಿತ್ತು.

- Advertisement -

ಬೋಸ್ ಅವರು 2011 ರಲ್ಲಿ ನಿವೃತ್ತರಾಗುವ ಮೊದಲು ಕೋಲ್ಕತ್ತಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.



Join Whatsapp