ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮೇ 27 ರಂದು ಜ್ಞಾನವಾಪಿ ಮಸೀದಿಯ ಕುರಿತು ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯೊಂದರಲ್ಲಿ ಇಸ್ಲಾಂ ಧರ್ಮದ ಮತ ಪ್ರಚಾರಕ ಪ್ರವಾದಿ ಮಹಮ್ಮದ್ ರನ್ನು ನಿಂದಿಸಿದ್ದರ ವಿರುದ್ದ ದೇಶದಾದ್ಯಂತ ಮತ್ತು ವಿದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಲವು ಕಡೆ ಪ್ರತಿಭಟನೆಗಳು ತಾರಕಕ್ಕೇರಿದೆ.
ಈ ಕೃತ್ಯವನ್ನು ಖಂಡಿಸಿ ಗಲ್ಫ್ ರಾಷ್ಟ್ರಗಳ ವ್ಯಾಪಕ ವಿರೋಧ ಮಾತ್ರವಲ್ಲದೆ ವಿರೋಧ ಪಕ್ಷಗಳ ಖಂಡನಾ ನಡೆಯು ಕೂಡ ಬಿಜೆಪಿಗೆ ತಲೆನೋವಾಗಿ ಬಿಟ್ಟಿದೆ. ಇದರ ಮುಂದುವರಿದ ಭಾಗವಾಗಿ ಭೀಮಸೇನಾ ನಾಯಕ ನವಾಬ್ ಸತ್ಪಾಲ್ ತನ್ವಾರ್ ಶರ್ಮಾಳ ನಾಲಗೆ ಕತ್ತರಿಸಿದವರಿಗೆ ಒಂದು ಕೋಟಿ ಬಹುಮಾನ ಘೋಷಿಸಿದ್ದಾರೆ.
ಶರ್ಮಾ ಅವರು ಪ್ರವಾದಿಯನ್ನು ಅವಮಾನಿಸಿದ್ದಾರೆ ಮತ್ತು ಭಾರತದಲ್ಲಿ ವಾಸಿಸುವ ಕೋಟ್ಯಂತರ ಮುಸ್ಲಿಮರಿಗೆ ನೋವುಂಟು ಮಾಡಿದ್ದಾರೆ ಎಂದು ಅವರು ವೀಡಿಯೊ ಸಂದೇಶದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.