ಭ್ರಷ್ಟಾಚಾರ | ಫ್ರಾನ್ಸ್ ಮಾಜಿ ಅಧ್ಯಕ್ಷನಿಗೆ ಮೂರು ವರ್ಷ ಜೈಲು

Prasthutha|

- Advertisement -

ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ತಪ್ಪಿತಸ್ಥರೆಂದು ಫ್ರಾನ್ಸ್ ನ್ಯಾಯಾಲವು ಇಂದು ಘೋಷಿಸಿ, ಮೂರು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದೆ.

2007 ರಿಂದ 2012 ರವರೆಗೆ ಫ್ರಾನ್ಸ್ ನ ನೇತೃತ್ವ ವಹಿಸಿದ್ದ ಸರ್ಕೋಜಿ, ನ್ಯಾಯಾಧೀಶ ಗಿಲ್ಬರ್ಟ್ ಅಜಿಬರ್ಟ್ರಿಗೆ

- Advertisement -

ಲಂಚ ನೀಡಲು ಪ್ರಯತ್ನಿಸಿದ್ದಾರೆ ಮತ್ತು ತನ್ನ ಪ್ರಭಾವವನ್ನು ಬಳಸಿಕೊಂಡು  ಗಿಲ್ಬರ್ಟಿಗೆ ಮೊನಾಕೊದಲ್ಲಿ ಪ್ಲಮ್ ಉದ್ಯೋಗವನ್ನು ದೊರಕಿಸಲು ಮುಂದಾಗಿದ್ದಾರೆ ಎಂಬ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.

ರಾಜಕೀಯದಿಂದ ನಿವೃತ್ತರಾಗಿದ್ದರೂ ಜನರ ನಡುವೆ ಇನ್ನೂ ಪ್ರಭಾವಶಾಲಿಯಾಗಿರುವ ಸರ್ಕೋಜಿಗೆ ತೀರ್ಪನ್ನು ಮೇಲ್ಮನವಿ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಲಾಗಿದೆ.

ಸರ್ಕೋಜಿ , ಫ್ರಾನ್ಸ್ ನಲ್ಲಿ ದಿವಂಗತ ಜಾಕ್ವೆಸ್ ಚಿರಾಕ್ ನಂತರ ಭ್ರಷ್ಟಾಚಾರದ ಶಿಕ್ಷೆಗೆ ಗುರಿಯಾದ ಎರಡನೇ ಮಾಜಿ ಅಧ್ಯಕ್ಷ ರಾಗಿದ್ದಾರೆ.



Join Whatsapp