ಪರ್ತ್: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಅಫ್ಗಾನಿಸ್ತಾನ ವಿರುದ್ಧ 5 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಪರ್ತ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವೇಗಿ ಸ್ಯಾಮ್ ಕರನ್ ಮಾರಕ ಬೌಲಿಂಗ್ ದಾಳಿಗೆ ಕುಸಿದ ಅಫ್ಘಾನ್ ಪಡೆ 19.4 ಓವರ್‌ಗಳಲ್ಲಿ ಕೇವಲ 112 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್, 18.1 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಮೊಹಮ್ಮದ್ ನಬಿ ಬಳಗವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ವೇಗಿ ಸ್ಯಾಮ್ ಕರನ್ ಬಿಗು ಬೌಲಿಂಗ್ ದಾಲಿಯನ್ನು ಎದುರಿಸಲಾಗದೆ ಅಫ್ಘಾನ್ ಬ್ಯಾಟ್ಸ್‌ಮನ್‌ಗಳು ಪವೆಲಿಯನ್ ಪರೇಡ್ ನಡೆಸಿದರು. 3.4 ಓವರ್‌ಗಳ ತನ್ನ ಸ್ಪೆಲ್‌ನಲ್ಲಿ ಸ್ಯಾಮ್, ಕೇವಲ 10 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು.
ಆರಂಭಿಕರಾದ ಗುರ್ಬಾಜ್ (10 ರನ್), ಹಜ್ರತ್‌ಉಲ್ಲಾ ಜಜೈ (7 ರನ್) ಬೇಗನೆ ನಿರ್ಗಮಿಸಿದರು. ಆಬಳಿಕ ಒಂದಾದ ಇಬ್ರಾಹಿಂ ಝದ್ರಾನ್ 32 ರನ್ ಮತ್ತು ಉಸ್ಮಾನ್ ಘನಿ 30 ರನ್‌ಗಳಿಸಿ ತುಸು ಪ್ರತಿರೋಧ ತೋರಿದರು. ಇವರಿಬ್ಬರ ವಿಕೆಟ್ ಪತನವಾಗುತ್ತಲೇ ಅಫ್ಘಾನ್ ರನ್ ಹರಿವಿಗೆ ಬ್ರೇಕ್ ಬಿತ್ತು. ನಂತರದ ಬಂದ 7 ಬ್ಯಾಟ್ಸ್‌ಮನ್‌ಗಳ ಪೈಕಿ 6 ಮಂದಿ ಎರಡಂಕಿಯ ಮೊತ್ತ ದಾಟಲಿಲ್ಲ. ಅದರಲ್ಲೂ ಮೂವರು ಶೂನ್ಯಕ್ಕೆ ನಿರ್ಗಮಿಸಿದರು. ಬೆನ್ ಸ್ಟೋಕ್ಸ್ ಮತ್ತು ಮಾರ್ಕ್ ವುಡ್ ತಲಾ ಎರಡು ವಿಕೆಟ್ ಪಡೆದರು