ಎಡಿಟೆಡ್ ಫೋಟೋ ಬಳಸಿ ಪೇಚಿಗೆ ಸಿಲುಕಿದ ಸಿಟಿ ರವಿ !

Prasthutha|

ಚೆನ್ನೈ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ತಮಿಳುನಾಡು ಉಸ್ತುವಾರಿ ಸಿಟಿ ರವಿ ಚಿತ್ರವೊಂದನ್ನು ಟ್ವಿಟರ್‌ನನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬರ ಮೇಲೊಬ್ಬರು ನಿಂತು ಕಂಬಕ್ಕೆ ಬಿಜೆಪಿ ಧ್ವಜವನ್ನು ಕಟ್ಟುತ್ತಿರುವ ಆ ಚಿತ್ರವನ್ನು ಬಿಜೆಪಿಯ ಇತರ ನಾಯಕರೂ ಹಂಚಿದ್ದಾರೆ. ಈ ಚಿತ್ರವನ್ನು ಉಲ್ಲೇಖಿಸಿ “ತಮಿಳುನಾಡಿನಲ್ಲಿ ಬಿಜೆಪಿ ಅರಳುತ್ತಿದೆ” ಎಂದು ಪ್ರತಿಪಾದಿಸಲಾಗುತ್ತಿದೆ.

- Advertisement -

ಹಿಮಾಚಲ ಪ್ರದೇಶದ ಬಿಜೆಪಿ ವಕ್ತಾರೆ ಪ್ರಜ್ವಲ್ ಬುಸ್ತಾ ಮತ್ತು ಉತ್ತರ ದೆಹಲಿಯ ಮಾಜಿ ಮೇಯರ್ ರವೀಂದರ್ ಗುಪ್ತಾ ಸೇರಿದಂತೆ ಅನೇಕ ಟ್ವಿಟರ್‌ ಖಾತೆಗಳು ಈ ಚಿತ್ರವನ್ನು ಹಂಚಿಕೊಂಡಿವೆ. ಆದರೆ ಈ ಚಿತ್ರ ಎಡಿಟ್ ಮಾಡಿದ್ದೆಂದು ತಿಳಿದು ಬಂದಿದೆ. ತೆಲಂಗಾಣದಲ್ಲಿ ಯುವಕರು ಬಿಎಸ್ಪಿ ಧ್ವಜವನ್ನು ಹಾರಿಸುತ್ತಿರುವುದರ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದೂ ತಿಳಿದುಬಂದಿದೆ.

- Advertisement -

ಯುವಕರು ಕಂಬವೊಂದಕ್ಕೆ BSPಯ ಧ್ವಜವನ್ನು ಒಬ್ಬರ ಮೇಲೆ ಒಬ್ಬರು ನಿಂತು ಕಟ್ಟಿದ್ದ ಧ್ವಜವನ್ನು ವಿಭಿನ್ನವಾಗಿ ಹಾರಿಸಿದ್ದರು. ಈ ಚಿತ್ರವನ್ನು ಅಂಬೇಡ್ಕರ್ ಸ್ಟೇಟಸ್‌ ಎಂಬ Pinterest ಪೇಜ್‌‌ನಲ್ಲಿ ಕೂಡಾ ಅಪ್‌ಲೋಡ್ ಮಾಡಲಾಗಿದೆ. ಆದರೆ ಈ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, BJPಯ ಕೆಲವು ಪ್ರಮುಖ ನಾಯಕರು ಸೇರಿದಂತೆ ಬೆಂಬಲಿಗರು, ತಮಿಳುನಾಡಿನಲ್ಲಿ BJP ಅರಳುತ್ತಿದೆ ಎಂದು ಪ್ರತಿಪಾದಿಸಿ ಹಂಚುತ್ತಿದ್ದಾರೆ.

Join Whatsapp