ಮಾಜಿ ಸರ್ವಾಧಿಕಾರಿ ಆಗಸ್ಟೋ ಫಿನೋಶೆಟ್ ಪತ್ನಿಯ ಮರಣವನ್ನು ಸಂಭ್ರಮಾಚರಿಸಿದ ಚಿಲಿ ನಾಗರಿಕರು!

Prasthutha|

ಸ್ಯಾಂಟಿಯಾಗೊ: ಚಿಲಿಯ ಮಾಜಿ ಅಧ್ಯಕ್ಷ ಮತ್ತು ಸರ್ವಾಧಿಕಾರಿ ಆಗಸ್ಟೊ ಫಿನೋಶೆಟ್ ಅವರ ಪತ್ನಿಯ ಮರಣವನ್ನು ನಾಗರಿಕರು ಭಾರೀ ಸಂಭ್ರಮಾಚರಿಸಿದ್ದಾರೆ.

- Advertisement -

99 ನೇ ವಯಸ್ಸಿನಲ್ಲಿ ನಿಧನರಾದ ಚಿಲಿಯ ಮಾಜಿ ಪ್ರಥಮ ಮಹಿಳೆ ಮರಿಯಾ ಲೂಸಿಯಾ ಹಿರಿಯರ್ಡ್ ರೋಡ್ರಿಗಸ್ ಅವರ ನಿಧನದಿಂದಾಗಿ ರಾಜಧಾನಿ ಸ್ಯಾಂಟಿಯಾಗೊದಲ್ಲಿ ಭಾರೀ ಸಂಭ್ರಮಾಚರಣೆ ನಡೆದಿದೆ. ಮರಣ ವಾರ್ತೆ ದೇಶದೆಲ್ಲೆಡೆ ಹರಿದಾಡುತ್ತಿದ್ದಂತೆಯೇ ಅಗಸ್ಟೋ ಫಿನೋಶೆಟ್ ಅವರ ಪರಂಪರೆ ಮರಿಯಾ ನಿಧನದಿಂದ ಕೊನೆಗೊಂಡಿದೆ ಎಂದು ನಾಗರಿಕರು ಹುಚ್ಚೆದ್ದು ಕುಣಿದಿದ್ದಾರೆ.

- Advertisement -

ವೀಡಿಯೋ ವೀಕ್ಷಿಸಿ….

ಆಗಸ್ಟೊ ಫಿನೋಶೆಟ್, 1973 ರಿಂದ 1990ರವರೆಗೆ ಚಿಲಿಯ ಅಧ್ಯಕ್ಷರಾಗಿದ್ದರು. ಫಿನೋಶೆಟ್ ಕ್ರೂರತೆಯಿಂದ ಚಿಲಿಯಲ್ಲಿ 3,000 ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದರು.

ಚಿಲಿಯ ಸೇನಾ ಮುಖ್ಯಸ್ಥನಾಗಿದ್ದ ಫಿನೋಶೆಟ್, 1974 ರಲ್ಲಿ ತಾನು ಚಿಲಿಯ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡು ಸರ್ವಾಧಿಕಾರವನ್ನು ನಡೆಸಿದ್ದನು.



Join Whatsapp