ಜ್ಞಾನವಾಪಿ ಮಸೀದಿಯ ಕುರಿತು ಎಸ್ಪಿ ಪಕ್ಷದ ಮುಸ್ಲಿಮ್ ಶಾಸಕರ ಮೌನವನ್ನು ಟೀಕಿಸಿದ AIMIM ರಾಜ್ಯ ಕಾರ್ಯದರ್ಶಿ ಬಂಧನ

Prasthutha|

ಲಖನೌ: ಬಲಪಂಥೀಯರು ಗುರಿಪಡಿಸುತ್ತಿರುವ ಜ್ಞಾನವಾಪಿ ಮಸೀದಿಯ ವಿಚಾರದಲ್ಲಿ ಮೌನವಹಿಸಿರುವ ಸಮಾಜವಾದಿ ಪಕ್ಷದ ಮುಸ್ಲಿಮ್ ಶಾಸಕರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ AIMIM ಉತ್ತರ ಪ್ರದೇಶ ರಾಜ್ಯ ಕಾರ್ಯದರ್ಶಿ ಹಕೀಮ್ ಅಬ್ದುಲ್ ಸಲಾಮ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಸದ್ಯ ಅವರ ವಿರುದ್ಧ ಕೀರ್ತಾರ್ ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹಕೀಮ್ ಅಬ್ದುಲ್ ಸಲಾಮ್ ಖಾನ್ ಅವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಕೀರ್ತಾರ್ ಪುರ ಠಾಣಾಧಿಕಾರಿ ಮನೋಜ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

ಜ್ಞಾನವಾಪಿ ಮಸೀದಿ ವಿಚಾರವಾಗಿ ಸಮಾಜವಾದಿ ಪಕ್ಷದ 36 ಮುಸ್ಲಿಮ್ ಶಾಸಕರ ಪೈಕಿ ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ ಎಂದು ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟನ್ನು ಹಂಚಿಕೊಂಡಿದ್ದರು. ಅಲ್ಲದೆ ಪಕ್ಷದ ಗುಲಾಮರಿಗೆ ಆಕ್ಷೇಪ ಎತ್ತುವ ಹಕ್ಕಿಲ್ಲ ಎಂಬರ್ಥದಲ್ಲಿ ಖಾನ್ ಹಿಂದಿಯಲ್ಲಿ ಫೇಸ್ ಬುಕ್ ನಲ್ಲಿ ಬರೆದಿದ್ದರು.

ಈ ಮಧ್ಯೆ ಅವರ ಬಂಧನವನ್ನು ಖಂಡಿಸಿದ AIMIM ರಾಜ್ಯಾಧ್ಯಕ್ಷ ಶೌಕತ್ ಅಲಿ, ಖಾನ್ ಅವರ ಪೋಸ್ಟ್ ನಿಂದ ಅಸಮಾಧಾನಗೊಂಡ ಸಮಾಜವಾದಿ ಪಕ್ಷ ಮುಖಂಡರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.



Join Whatsapp