ಮ್ಯಾಂಚೆಸ್ಟರ್‌ ಯುನೈಟೆಡ್‌ ಜೊತೆಗಿನ ಕ್ರಿಸ್ಟಿಯಾನೊ ರೊನಾಲ್ಡೊ ಒಪ್ಪಂದ ರದ್ದು

Prasthutha|

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ದೈತ್ಯ ಕ್ಲಬ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ ಮತ್ತು ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಶೀತಲ ಸಮರಕ್ಕೆ ಕೊನೆಗೂ ತೆರೆಬಿದ್ದಿದೆ. ರೊನಾಲ್ಡೊ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಹೇಳಿರುವ ಯುನೈಟೆಡ್‌ ಕ್ಲಬ್‌, ವಿಶ್ವಕಪ್‌ ಟೂರ್ನಿಯ ಬಳಿಕ ಮ್ಯಾಂಚೆಸ್ಟರ್‌ ಕ್ಲಬ್‌ಗೆ ಹಿಂತಿರುಗುವ ಆವಶ್ಯಕತೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

- Advertisement -

ಟಾಕ್‌ ಟಿವಿಯಲ್ಲಿ ಪಿಯರ್ಸ್‌ ಮಾರ್ಗನ್‌ ಜೊತೆಗಿನ ಸಂದರ್ಶನದಲ್ಲಿ ಯುನೈಟೆಡ್‌ ತಂಡ ಮತ್ತು ಕೋಚ್‌ ಎರಿಕ್‌ ಟೆನ್‌ ಹ್ಯಾಗ್ ವಿರುದ್ಧ ರೊನಾಲ್ಡೊ ತಮ್ಮ ಅಸಮಾಧಾನವನ್ನು  ಹೊರಹಾಕಿದ್ದರು. ಎರಿಕ್‌ ಟೆನ್‌ ಹ್ಯಾಗ್‌ ಮೇಲೆ ತಾವು ಯಾವುದೇ ಗೌರವ ಹೊಂದಿಲ್ಲ ಎಂದು ಹೇಳಿದ್ದ ರೊನಾಲ್ಡೊ, ತನ್ನ ಮಗಳ ಅನಾರೋಗ್ಯದ ವಿಚಾರವನ್ನು ಕ್ಲಬ್‌ನ ಅಧಿಕಾರಿಗಳು ನಂಬಿರಲಿಲ್ಲ. ಕಳೆದ 13 ವರ್ಷಗಳಲ್ಲಿ ಯುನೈಟೆಡ್‌, ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಪ್ರಯತ್ನಿಸಿಲ್ಲ ಎಂದು ಆರೋಪಿಸಿದ್ದರು.

 ಪಿಯರ್ಸ್‌ ಮಾರ್ಗನ್‌ ಜೊತೆಗಿನ ರೊನಾಲ್ಡೊ ಸಂದರ್ಶನ ಫುಟ್‌ಬಾಲ್‌ ವಲಯದಲ್ಲಿ ಭಾರಿ ಸುದ್ದಿಯಾಗಿತ್ತು. ಎಲವನ್ನೂ ಪರಿಶೀಲಿಸಲಾಗುತ್ತಿದೆ ಎಂದಷ್ಟೇ ಕ್ಲಬ್‌ ಈ ವಿಚಾರದಲ್ಲಿ ಪ್ರತಿಕ್ರಯಿಸಿತ್ತು. ಇದೀಗ ಮೊದಲ ಹಂತವಾಗಿ ರೊನಾಲ್ಡೊ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಿದೆ.

- Advertisement -

ಮುಂದಿನ ಜೂನ್‌ವರೆಗೆ ರೊನಾಲ್ಡೊ ಯುನೈಟೆಡ್‌ ಜೊತೆಗೆ ಒಪ್ಪಂದವನ್ನು ಹೊಂದಿದ್ದರು. ಇದಕ್ಕಾಗಿ ಕ್ಲಬ್‌ 16 ಮಿಲಿಯನ್‌ ಯೂರೋ ಹಣವನ್ನು ರೊನಲ್ಡೊಗೆ ಪಾವತಿಸಬೇಕಾಗಿದೆ. ಆದರೆ ದಿಗ್ಗಜ ಆಟಗಾರನಿಗೆ ಯಾವುದೇ ಹಣವನ್ನು ಪಾವತಿಸದಿರಲು ಯುನೈಟೆಡ್‌ ಅಧಿಕೃತರು ನಿರ್ಧರಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ.



Join Whatsapp