ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್ ಚಾನಲ್’ಗೆ ಎಂಟ್ರಿ

Prasthutha|

►ಯೂಟ್ಯೂಬ್ ದಾಖಲೆಗಳು ಧೂಳೀಪಟ!

- Advertisement -


ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಫುಟ್ಬಾಲ್ ನಲ್ಲಿ ಮಿಂಚಿದ ರೊನಾಲ್ಡೋ ಈಗ ಮೈದಾನದ ಹೊರಗೂ ನೂತನ ದಾಖಲೆ ಬರೆದಿದ್ದಾರೆ.


ರೊನಾಲ್ಡೊ ‘ಯುಆರ್ ಕ್ರಿಸ್ಟಿಯಾನೋ’ ಎಂಬ ತಮ್ಮ ನೂತನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಮೂಲಕ ಕಂಟೆಂಟ್ ಕ್ರಿಯೇಟರ್ ವೃತ್ತಿಜೀವನಕ್ಕೆ ಜಿಗಿಯಲು ನಿರ್ಧರಿಸಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್ ಅನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು. ಜುಲೈ 8 ರಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ಅವರು, 17 ಗಂಟೆಯ ಹಿಂದೆ ಹಾಕಿದ ವೀಡಿಯೋ 4 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ರೊನಾಲ್ಡೊ ಅವರ ಯೂಟ್ಯೂಬ್ ಖಾತೆಯ ಚಂದಾದಾರರ ಸಂಖ್ಯೆ 14.7 ಮಿಲಿಯನ್ ಗೆ ತಲುಪಿದೆ, ಇದು ಮತ್ತೊಂದು ವಿಶ್ವ ದಾಖಲೆಯಾಗಿದೆ.

- Advertisement -


ಯೂಟ್ಯೂಬ್ ಚಾನೆಲ್ ಆರಂಭಿಸಿದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮೊದಲ ಎರಡು ಗಂಟೆಗಳಲ್ಲೇ ರೊನಾಲ್ಡೊ ವಿಶ್ವ ದಾಖಲೆ ಬರೆದಿದ್ದಾರೆ. ಯೂಟ್ಯೂಬ್ ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.



Join Whatsapp