100 ಕೋಟಿ ಫಾಲೋವರ್ಸ್: ಇತಿಹಾಸ ಸೃಷ್ಟಿಸಿದ ಕ್ರಿಸ್ಟಿಯಾನೋ ರೊನಾಲ್ಡೊ

Prasthutha|

ಫುಟ್ಬಾಲ್ ಅಂಗಳದಲ್ಲಿ ದಾಖಲೆಗಳನ್ನು ಬರೆಯುತ್ತಿದ್ದ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಸೋಶಿಯಲ್ ಮೀಡಿಯಾದಲ್ಲೂ ದಾಖಲೆಗಳ ಶಿಖರವನ್ನೇರಿದ್ದಾರೆ.

- Advertisement -

1 ಕೋಟಿ ಫಾಲೋವರ್ಸ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗಿರುವ ಈ ಕಾಲದಲ್ಲಿ ರೊನಾಲ್ಡೊ, ಬರೋಬ್ಬರಿ 1 ಬಿಲಿಯನ್ ಅಂದರೆ 100 ಕೋಟಿ ಅನುಯಾಯಿಗಳನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮಾಹಿತಿಯನ್ನು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿರುವ ರೊನಾಲ್ಡೊ, ‘ಪ್ರತಿ ಹೆಜ್ಜೆಯಲ್ಲೂ, ಪ್ರತಿ ಏರಿಳಿತದಲ್ಲೂ ನೀನು ನನ್ನೊಂದಿಗಿರುವೆ. ಈ ಪಯಣ ನಮ್ಮ ಪಯಣ. ನಾವು ಏನನ್ನು ಸಾಧಿಸಬಹುದು ಎಂಬುದಕ್ಕೆ ಯಾವುದೇ ಮಿತಿಗಳಿಲ್ಲ ಎಂದು ನಾವು ಒಟ್ಟಾಗಿ ತೋರಿಸಿದ್ದೇವೆ. ನನ್ನನ್ನು ನಂಬಿದ್ದಕ್ಕಾಗಿ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನ ಜೀವನದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಉತ್ತಮವಾದದ್ದು ಇನ್ನೂ ಬರಬೇಕಿದೆ. ನಾವು ಒಟ್ಟಾಗಿ ಶ್ರಮಿಸುತ್ತೇವೆ ಮತ್ತು ಇತಿಹಾಸವನ್ನು ರಚಿಸುತ್ತೇವೆ ಎಂದಿದ್ದಾರೆ.

- Advertisement -

ಪೋರ್ಚುಗೀಸ್ ಸೂಪರ್‌ಸ್ಟಾರ್ ರೊನಾಲ್ಡೊ ಇತ್ತೀಚೆಗಷ್ಟೇ ‘ಯುರ್ ಕ್ರಿಸ್ಟಿಯಾನೋ’ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ಕೇವಲ 90 ನಿಮಿಷಗಳಲ್ಲಿ 1 ಮಿಲಿಯನ್ ಫಾಲೋವರ್ಸ್​ ಪಡೆದಿದ್ದ ರೊನಾಲ್ಡೊ, 12 ಗಂಟೆಗಳಲ್ಲಿ ಫಾಲೋವರ್ಸ್​ಗಳ ಸಂಖ್ಯೆ 10 ಮಿಲಿಯನ್ ದಾಟಿತ್ತು. ಪ್ರಸ್ತುತ ರೊನಾಲ್ಡೊ ಅವರ​ ಯೂಟ್ಯೂಬ್‌ಗೆ 60.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಉಳಿದಂತೆ ಇನ್​ಸ್ಟಾಗ್ರಾಮ್​ನಲ್ಲಿ 638 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ರೊನಾಲ್ಡೊ, ಎಕ್ಸ್​ನಲ್ಲಿ (ಹಿಂದಿನ Twitter) 113 ಮಿಲಿಯನ್ ಫಾಲೋವರ್ಸ್​ ಮತ್ತು ಫೇಸ್​ಬುಕ್​ನಲ್ಲಿ 170 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇದಲ್ಲದೆ, ಚೀನಾದ ಸಾಮಾಜಿಕ ಮಾಧ್ಯಮ ವೈಬೊದಲ್ಲಿ 7.3 ಮಿಲಿಯನ್ ಅನುಯಾಯಿಗಳು ಮತ್ತು ಕುಯಿಶೌನಲ್ಲಿ 9.3 ಮಿಲಿಯನ್ ಅನುಯಾಯಿಗಳು ಇದ್ದಾರೆ.

39 ವರ್ಷ ವಯಸ್ಸಿನ ರೊನಾಲ್ಡೊ ತಮ್ಮ ಅಂತರಾಷ್ಟ್ರೀಯ ಮತ್ತು ಕ್ಲಬ್ ಫುಟ್ಬಾಲ್ ವೃತ್ತಿಜೀವನದಲ್ಲಿ ಇದುವರೆಗೆ 900 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ.



Join Whatsapp