“ನಾನು ಶುಕ್ರವಾರದ ನಮಾಝ್, ರಮಝಾನಿನ ಉಪವಾಸ ಆಚರಿಸುತ್ತಿದ್ದೆ; ತಾರತಮ್ಯವನ್ನು ಮೆಟ್ಟಿ ನಿಲ್ಲಲು ಬಹಳ ಕಷ್ಟ ಪಟ್ಟಿದ್ದೆ”: ಆಸ್ಟ್ರೇಲಿಯನ್ ಕ್ರಿಕೆಟಿಗ ಉಸ್ಮಾನ್ ಖ್ವಾಜಾ

Prasthutha|

►‘ಜನಾಂಗೀಯವಾದದ ಕುರಿತ ಚರ್ಚೆ ಈಗ ಅತ್ಯಗತ್ಯ’ 

- Advertisement -

ಸಿಡ್ನಿ : ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಉಸ್ಮಾನ್ ಖ್ವಾಜಾ, ತಾನೆದುರಿಸಿದ ಜನಾಂಗೀಯ ತಾರತಮ್ಯ ಹಾಗೂ ತನ್ನ ವಿಶಿಷ್ಟ ಆಚಾರ ವಿಚಾರಗಳ ಕುರಿತಂತೆ abc.net.au ಮಾಧ್ಯಮದ ಜೊತೆ ಮನ ಬಿಚ್ಚಿ ಹಂಚಿಕೊಂಡಿದ್ದಾರೆ.

ತನ್ನ ಹದಿಹರೆಯದಲ್ಲಿ ನಮ್ಮ ನಡುವೆ ಇರುವ ‘ಸಾಂಸ್ಕೃತಿಕ ತಡೆಗೋಡೆ  ಯನ್ನು ಮೆಟ್ಟಿ ನಿಲ್ಲಲು ನಾನು ಬಹಳ ಕಷ್ಟಪಟ್ಟಿದ್ದೆ ಎನ್ನುತ್ತಾರೆ. ಸಂದರ್ಶನದಲ್ಲಿ ಅವರು, “ ನಿಮಗೆ ಗೊತ್ತಿರಬಹುದು, ನಾನು ಶುಕ್ರವಾರದ ವಿಶೇಷ ಪ್ರಾರ್ಥನೆ ಸೇರಿದಂತೆ ನಮಾಝ್ ನಿರ್ವಹಿಸುತ್ತಿದ್ದೆ, ನಾನು ಮದ್ಯ ಸೇವಿಸುತ್ತಿರಲಿಲ್ಲ, ರಮಝಾನಿನಲ್ಲಿ ಉಪವಾಸ ಆಚರಿಸುತ್ತಿದ್ದೆ. 2000 ದಶಕದ ಆರಂಭದಲ್ಲಿ ಇಂತಹ ಹಲವು ವಿಚಾರಗಳಿದ್ದವು. ಹೆಚ್ಚಿನ ಜನರಿಗೆ ಇವೆಲ್ಲವೂ ತಿಳಿದಿರಲಿಲ್ಲ ಎಂದು ಉಸ್ಮಾನ್ ಖ್ವಾಜಾ ಹೇಳಿದ್ದಾರೆ.    

- Advertisement -

ಸದ್ಯಕ್ಕೆ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿರುವ ಉಸ್ಮಾನ್ ಖ್ವಾಜಾ, ಸಣ್ಣದರಲ್ಲೇ ಜನಾಂಗೀಯ ತಾರತಮ್ಯವನ್ನು ಎದುರಿಸಿರುವುದಾಗಿ ಹೇಳಿದ್ದು, ತನ್ನ ಚರ್ಮದ ಬಣ್ಣದ ಕಾರಣದಿಂದ ತಾನು ಆಸ್ಟ್ರೇಲಿಯಾ ತಂಡದಲ್ಲಿ ಎಂದಿಗೂ ಸ್ಥಾನ ಪಡೆಯುವುದಿಲ್ಲ ಎಂದು ಜನರು ಹೇಳುತ್ತಲೇ ಇದ್ದರು. ಒಂದು ರೀತಿಯಲ್ಲಿ ನನಗದು ಕೇಳಿ ಕೇಳಿ ಅಭ್ಯಾಸವಾಗಿತ್ತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.       

ನಾನು ಎಲ್ಲರಿಗಿಂತ ತುಂಬಾ ಭಿನ್ನವಾಗಿದ್ದೆ ಮತ್ತು ಅದು ಸ್ವಲ್ಪ ಮಟ್ಟಿಗೆ ಕೆಲವರು ಇದನ್ನು ವಿರೋಧಿಸುತ್ತಿದ್ದರು. ಅದನ್ನು ನಾನು ಪ್ರತಿ ಕಾಲದಲ್ಲೂ ಗಮನಿಸಿದ್ದೇನೆ. ಅದು ಕೆಲವೊಮ್ಮೆ ಸಂಸ್ಕೃತಿಯೊಂದಿಗೆ, ವ್ಯವಸ್ಥಿತ ಜನಾಂಗೀಯತೆಯೊಂದಿಗೆ ಸಂಬಂಧ ಹೊಂದಿತ್ತು. ಇವುಗಳು ನನ್ನ ವಿರುದ್ಧದ ಪಕ್ಷಪಾತಕ್ಕೂ ಕಾರಣವಾಗಿತ್ತು. ಕ್ರಿಕೆಟ್ ಇತರೆ ಆಟಗಳಂತೆ ಜನರು ಆಯ್ಕೆ ಮಾಡಿದ ಒಂದು ಕ್ರೀಡೆಯಾಗಿದೆ. ಅಲ್ಲೂ ಉತ್ತಮ ಜನರಿದ್ದಾರೆ. ನಾನು ಕ್ರಿಕೆಟಿನಲ್ಲಿ ವ್ಯವಹರಿಸಿದ ಶೇಕಡಾ 89 ಜನರು ಉತ್ತಮರು ಎಂದು ಉಸ್ಮಾನ್ ಖ್ವಾಜಾ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.

ಉಸ್ಮಾನ್ ಖ್ವಾಜಾ 1986ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಜನಿಸಿದರು ಮತ್ತು ಅವರು ನಾಲ್ಕು ವರ್ಷದವರಾಗಿದ್ದಾಗ ಅವರ ಕುಟುಂಬ ಸಿಡ್ನಿಗೆ ಸ್ಥಳಾಂತರಗೊಂಡಿತು. ಕ್ವೀನ್ಸ್ ಲ್ಯಾಂಡ್ ನಾಯಕನಾಗಿರುವ ಖ್ವಾಜಾ, ಈಗ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿರುವ ಬಡ ಮಕ್ಕಳಿಗೆ ಕ್ರಿಕೆಟ್ ಕಲಿಸುವ ಚಾರಿಟಿ ಫೌಂಡೇಶನ್ ನ ಉಸ್ತುವಾರಿ ವಹಿಸಿದ್ದಾರೆ. ಜನಾಂಗೀಯ ತಾರತಮ್ಯದ ಕುರಿತಾಗಿನ ಚರ್ಚೆಗಳು ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ ಎಂದವರು ಹೇಳಿದ್ದಾರೆ.

Join Whatsapp