ಬಿಜೆಪಿ ಯುವ ಮೋರ್ಚಾ ಅಧಿವೇಶನದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾಗಿ: ಬಿಜೆಪಿ ಶಾಸಕ ವಿಶಾಲ್

Prasthutha|

ಶಿಮ್ಲಾ: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಅಧಿವೇಶನದಲ್ಲಿ ಭಾರತದ ತಂಡದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾಗವಹಿಸಲಿದ್ದಾರೆ ಎಂದು ಧರ್ಮಶಾಲಾ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ಹೇಳಿದ್ದಾರೆ. ಇದೇ ತಿಂಗಳ 12ರಿಂದ 15ರವರೆಗೆ ಧರ್ಮಶಾಲಾದಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಯಲಿದ್ದು, ಕಾರ್ಯಕ್ರಮಕ್ಕೆ ದ್ರಾವಿಡ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

- Advertisement -

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಇತರ ಪದಾಧಿಕಾರಿಗಳು ಮತ್ತು ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದು, ಹಿಮಾಚಲ ಪ್ರದೇಶದ ಸಿಎಂ ಜೈ ರಾಮ್ ಠಾಕೂರ್ ಭಾಗವಹಿಸಲಿದ್ದಾರೆ ಎಂದು ನೆಹ್ರಿಯಾ ತಿಳಿಸಿದ್ದಾರೆ. ದೇಶದಾದ್ಯಂತ 139 ಪ್ರತಿನಿಧಿಗಳು ಅಧಿವೇಶನಕ್ಕೆ ಆಗಮಿಸಲಿದ್ದು, ಮೇ 12 ರಿಂದ 15ರವರೆಗೆ ಧರ್ಮಶಾಲಾದಲ್ಲಿ 4 ದಿನಗಳ ಕಾಲ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅಧಿವೇಶನದಲ್ಲಿ ದ್ರಾವಿಡ್ ಉಪಸ್ಥಿತಿಯು ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಂದೇಶವನ್ನು ನೀಡುತ್ತದೆ. ಅವರ ಯಶಸ್ಸಿನಿಂದ ರಾಜಕೀಯ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿಯೂ ಯಶಸ್ಸುಗಳಿಸಬಹುದು ಎಂಬ ಸಂದೇಶವನ್ನು ಯುವಕರಲ್ಲಿ ನೀಡುತ್ತೇವೆ ಎಂದು ವಿಶಾಲ್ ನೆಹ್ರಿಯಾ ತಿಳಿಸಿದ್ದಾರೆ.

Join Whatsapp