ಧೈರ್ಯವಿದ್ದರೆ 7 ರಾಜ್ಯಗಳ ಹಿಂಸಾಚಾರದ ತನಿಖೆಗೆ ಸಮಿತಿ ರಚಿಸಲಿ; ಅಮಿತ್ ಶಾ ಗೆ ಅಶೋಕ್ ಗೆಹಲೋತ್ ಸವಾಲು

Prasthutha|

ಜೈಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಧೈರ್ಯವಿದ್ದರೆ, ರಾಜಸ್ಥಾನದ ಕರೌಲಿ ಸಹಿತ  ದೇಶದ 7 ರಾಜ್ಯಗಳಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರ ಘಟನೆಗಳಿಗೆ ನಿಜವಾದ ಕಾರಣವೇನು ಎಂಬ ಬಗ್ಗೆ ತನಿಖೆಗೆ ಸಮಿತಿ ರಚಿಸಲಿ  ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸವಾಲು ಹಾಕಿದ್ದಾರೆ.

- Advertisement -

ಎಪ್ರಿಲ್ 2ರಂದು ಹಿಂದೂಗಳ ಹೊಸ ವರ್ಷಾಚರಣೆ ಪ್ರಯುಕ್ತ ಕರೌಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಕ್  ರ್ಯಾ ಲಿ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯಲ್ಲಿ ಹಲವು ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ, 35 ಮಂದಿ ಗಾಯಗೊಂಡಿದ್ದರು.

‘ಈ ಹಿಂಸಾಚಾರದ ಘಟನೆಗಳಿಗೆ ನಿಜವಾದ ಕಾರಣವೇನು ಎಂದು ತಿಳಿಯಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಬೇಕು. ಈ ಕ್ರಮದಿಂದ ಹಿಂಸಾಚಾರಕ್ಕೆ ಕಾರಣವೇನು ಎಂಬುದು ಗೊತ್ತಾಗಲಿದೆ. ಜೊತೆಗೆ ಇಂತಹ ಹಿಂಸಾಚಾರಗಳು ಮತ್ತೆ ಮರುಕಳಿಸುವುದಿಲ್ಲ’ ಎಂದು ಹೇಳಿದರು.

- Advertisement -

ಮೇ 13ರಿಂದ 15ರವರೆಗೆ ನಡೆಯಲಿರುವ ಕಾಂಗ್ರೆಸ್ ಚಿಂತನ ಶಿಬಿರದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ಧಾರ್ಮಿಕತೆ ಮತ್ತು ಜಾತಿ ಆಧಾರಿತ ರಾಜಕೀಯವು ದೇಶಕ್ಕೆ ಪ್ರಯೋಜನವಿಲ್ಲ ಎಂದು ಹೇಳಿದರು.

Join Whatsapp