ಕೊಡವರು- ಮುಸ್ಲಿಮರ ಮಧ್ಯೆ ಸಂಘರ್ಷಕ್ಕೆ ಸಂಚು ರೂಪಿಸಿದವರ ಪತ್ತೆಗೆ ಸಿಪಿಎಂ ಆಗ್ರಹ

Prasthutha|

ಮಡಿಕೇರಿ: ಕೊಡವರು ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷಕ್ಕೆ ಸಂಚು ರೂಪಿಸಿದವರು ಪೊಲೀಸರು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಸಿಪಿಎಂ ಪಕ್ಷ ಆಗ್ರಹಿಸಿದೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ ರಮೇಶ್, ಕೊಡವರ ಕುಲದೇವಿ ಕೊಡಗಿನ ಆರಾಧ್ಯ ದೇವತೆ ಕಾವೇರಮ್ಮ ಮಾತೆಯ ಮತ್ತು ಕೊಡವ ಸಮುದಾಯದ ಹೆಣ್ಣು ಮಕ್ಕಳನ್ನು ನಕಲಿ ಖಾತೆ ಸೃಷ್ಟಿಸಿ ಅವಮಾನ ಮಾಡಿ ತುಚ್ಚವಾಗಿ ಪೋಸ್ಟ್ ಹಾಕಿದ ಯುವಕನೋರ್ವನನ್ನು ಕೊಡಗಿನ ಪೊಲೀಸರು ಬಂಧಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಿದ್ಧಾಪುರದ ಮಹಮ್ಮದ್ ಅಶ್ಫಾಕ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ತಾಯಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳ ಬಗ್ಗೆ ಪೋಸ್ಟ್ ವೈರಲ್ ಆದ ನಂತರ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡು ಪ್ರತಿಭಟನೆ ನಡೆದಿತ್ತು. ಅಪರಾಧಿಯನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಕೊಡಗಿನ ಪೊಲೀಸರು ನೈಜ ಅಪರಾಧಿಯನ್ನು ಬಂಧಿಸಿದ್ದಾರೆ. ಪೊಲೀಸ್ ತಂಡದ ಶ್ರಮಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಬೇಕಿದೆ. ಕೊಡಗು ಶಾಂತಿ ಪ್ರಿಯ ಜಿಲ್ಲೆ ಇಲ್ಲಿ ಅಶಾಂತಿಯನ್ನು ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಪೋಸ್ಟರ್ ಗಳನ್ನು ಹಾಕಿ ಸಾಮರಸ್ಯವನ್ನು ಕದಡುವ ಕೆಲಸಕ್ಕೆ ಕೈ ಹಾಕಿದವರ ಪತ್ತೆ ಹಚ್ಚಿ ಕೊಡವರನ್ನು ಅವಹೇಳನ ಮಾಡಿರುವ ಕಾಮೆಂಟ್ ಗಳ ಹಿಂದಿನ ಸಂಚಿಕೊರರು ಯಾರು ? ಕೊಡವರು, ಮುಸ್ಲಿಮರ ಮಧ್ಯೆ ಸಂಘರ್ಷಕ್ಕೆ ಸಂಚು ಮಾಡಿದ್ಯಾರು ? ಇವರುಗಳನ್ನು ಪೊಲೀಸ್ ಇಲಾಖೆ ತಕ್ಷಣವೇ ಕಂಡು ಹಿಡಿದು ಶಿಕ್ಷೆ ನೀಡುವುದರ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಇಲಾಖೆ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.



Join Whatsapp