ಉಡುಪಿ ಶೌಚಾಲಯ ವಿಡಿಯೋ ಗುಲ್ಲು | ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲು ಸಿಪಿಐ (ಎಂಎಲ್) ಆಗ್ರಹ

Prasthutha|

ಬೆಂಗಳೂರು: ಉಡುಪಿ ಶೌಚಾಲಯ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದವೆಬ್ಬಿಸಿರುವ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲು ಸಿಪಿಐ (ಎಂಎಲ್) ಆಗ್ರಹಿಸಿದೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಪಿಐ (ಎಂಎಲ್) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ವಿವಾದ ,ಹಿಂಸೆ ಹಾಗೂ ಅಶಾಂತಿಯೆ ಸಂಘ ಪರಿವಾರದ ಬಂಡವಾಳವಾಗಿದೆ. ಪುನ: ಇದರಿಂದಲೇ ರಾಜಕೀಯವಾಗಿ ಚೇತರಿಸಿಕೊಳ್ಳುವ ಅಜೆಂಡಾ ರಾಜ್ಯ ಬಿಜೆಪಿ ಮುಂದಿದೆ. ಇದರ ಪೂರ್ವಯೋಜಿತ ಪ್ರಚಾರವೇ ಉಡುಪಿಯ ನೇತ್ರ ಜ್ಯೋತಿ ಕಾಲೇಜು ಶೌಚಾಲಯದ ವಿಡಿಯೊ ವದಂತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ವಿದ್ಯಾಥಿ೯ನಿಯರ “ಶೌಚಾಲಯದ ಖಾಸಗಿ ವಿಡಿಯೋ ಮಾಡಿದ ಮುಸ್ಲಿಮ್ ವಿದ್ಯಾಥಿ೯ನಿಯರು; ಅಜ್ಮೀರ ರೀತಿಯಲ್ಲಿ ಹಿಂದೂ ವಿದ್ಯಾಥಿ೯ನಿಯರ ಅತ್ಯಾಚಾರಕ್ಕೆ ಅಸ್ತ್ರವಾಗಲಿರುವ ವಿಡಿಯೋ” ಎಂದು ಸಾಮಾಜಿಕ ಜಾಲ ತಾಣದಲ್ಲಿ ಹಿಂದುತ್ವ ಸಂಘಟನೆಗಳೇ ಗುಲ್ಲೆಬ್ಬಿಸಿವೆ. ಇದು ಬಿಜೆಪಿ ಪ್ರಾಯೋಜಿತ ವಿಷಯ ಪ್ರಚಾರ ಎಂದು ಈಗಾಗಲೇ ಸಾಬೀತಾಗಿದೆ. ವಿಧ್ಯಾಥಿ೯ಗಳಾಗಲಿ ಅಥವಾ ಕಾಲೇಜ್ ಆಡಳಿತ ಮಂಡಳಿಯಾಗಲಿ ದೂರು ನೀಡಿರುವುದಿಲ್ಲ ಎಂದು ಉಡುಪಿ ಪೋಲಿಸ್ ಉನ್ನತಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

- Advertisement -

ಹಾಗೆಯೇ,ಕಾಲೇಜನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮೂರು ಜನ ಮುಸ್ಲಿಮ್  ವಿದ್ಯಾಥಿ೯ಗಳು ಮೊಬೈಲ್ ತೆಗೆದುಕೊಂಡು ಹೋದ ಕಾರಣಕ್ಕೆ ಅವರನ್ನು ಅಮಾನತ್ತು ಮಾಡಲಾಗಿದೆ ವಿನಾ: ವಿಡಿಯೋ ಕಾರಣಕ್ಕಲ್ಲ.ಅವರ ಮೊಬೈಲ್ ನಲ್ಲಿ ಅಂಥ ಯಾವ ವಿಡಿಯೊ ಇಲ್ಲ ಎಂದು ಅವರು ಹೇಳಿದ್ದಾರೆ.

ಹಾಗಿದ್ದರೂ ಉಡುಪಿಯ ಬಿಜೆಪಿ ಶಾಸಕ ಯಶ್ ಪಾಲ್ ” ಹಿಂದೂ ಯುವತಿಯರ ಖಾಸಗಿ ವಿಡಿಯೋಗಳನ್ನು ಸಮಾಜ ಘಾತುಕ ಶಕ್ತಿಗಳ ಕೈಗೆ ಕೊಟ್ಟು ಅವರ ಜೀವನವನ್ನು ಹಾಳು ಮಾಡಲು ಮುಂದಾದ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ, ನಾನು ಹಿಂದೂ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ  ವಿದ್ಯಾರ್ಥಿಗಳನ್ನು ಮತೀಯ ಗುಂಪು ಘರ್ಷಣೆಗೆ ಪ್ರಚೋಧಿಸಿದ್ದಾರೆ. ಮಣಿಪುರದ ಭತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರಗಳನ್ನು ಆರಾಧಿಸುವ ಇವರು ಇಲ್ಲಿ  ಮುಸ್ಲಿಮ್ ವಿದ್ಯಾರ್ಥಿಗಳ  ವಿರುದ್ದ ಹಿಂದೂ ವಿದ್ಯಾರ್ಥಿಗಳನ್ನು ಎತ್ತಿಕಟ್ಟುತ್ತಿದ್ದಾರೆ. ಇವರ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕಾನೂನ ಕ್ರಮ ಕೈಗೊಳ್ಳ ಬೇಕೆಂದು ಬಿ.ರುದ್ರಯ್ಯ ಒತ್ತಾಯಿಸಿದ್ದಾರೆ.

ಹಾಗೆಯೇ,ಸಾಮಾಜಿಕ ಜಾಲ ತಾಣದಲ್ಲಿ, ಸಮಾಜಕ್ಕೆ ಬೆಂಕಿ ಹಚ್ಚುವ ಸುದ್ದಿಗಳನ್ನು  ಹಬ್ಬಿಸುವ ಸಾವಿರಾರು ಸೈಬರ್ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪಾಲನೆ ಪೋಷಣೆಯ ಕೆಲಸ ಬಿಜೆಪಿ ಸಂಘ ಪರಿವಾರದ್ದಾಗಿದೆ. ಇದು ಭಾರಿ ಪ್ರಮಾಣದ ಸೈಬರ್ ಕ್ರೈಮ್ ಆಗಿ ನಿಂತಿದೆ. ಇದನ್ನು ಹತ್ತಿಕ್ಕಲು ಸರಕಾರ ಮುಂದಾಗಬೇಕೆಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ರಾಜ್ಯಾಧ್ಯಕ್ಷರು ಸರಕಾರವನ್ನು ಆಗ್ರಹಿಸಿದ್ದಾರೆ.

Join Whatsapp