ವಿಮಾನದಲ್ಲಿ ಕೇರಳ ಸಿಎಂ ಮೇಲೆ ಹಲ್ಲೆಗೆ ಯತ್ನ: ಡಿಜಿಸಿಎಗೆ ಪತ್ರ ಬರೆದ ಸಿಪಿಐ(ಎಂ) ಸಂಸದ

Prasthutha|

ನವದೆಹಲಿ: ಕಣ್ಣೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಕೇರಳದ ರಾಜ್ಯಸಭಾ ಸಂಸದ ಡಾ.ವಿ.ಶಿವದಾಸನ್ ಅವರು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಜೂನ್ 13 ರಂದು ಕಣ್ಣೂರಿನಿಂದ ತಿರುವನಂತಪುರಂಗೆ ಇಂಡಿಗೋ ವಿಮಾನದಲ್ಲಿ ವಿಮಾನ ಭದ್ರತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಘೋರ ಪ್ರಯತ್ನದ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ ಎಂದು ಶಿವದಾಸನ್ ಜೂನ್ 13 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಅತ್ಯಂತ ಖಂಡನೀಯ ಘಟನೆಯ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಮತ್ತು ಮುಖ್ಯಮಂತ್ರಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೇಲ್ಮನೆ ಸಂಸದ ಶಿವದಾಸನ್ ಹೇಳಿದರು.



Join Whatsapp