ಮಡಿಕೇರಿ : ಶನಿವಾರಸಂತೆಯಲ್ಲಿ ಸಂಘಪರಿವಾರವು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು
ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ನಗರದಲ್ಲಿ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನೀಲ್ ಜನಸಾಮಾನ್ಯರು ಇಂದು ಬೆಲೆಏರಿಕೆಯಿಂದ ತತ್ತರಿಸಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳಿಗೆ ಇಡೀ ಶಾಪ ಹಾಕುತ್ತಿರುವ ಈ ಸಂದರ್ಭದಲ್ಲಿ ಜನರ ದಿಕ್ಕನ್ನು ಬೇರೆಡೆ ಸೇಳೆಯಲು ಇಂತಹ ಹಲ್ಲೆಗಳು ನಡೆಸುತ್ತಿದ್ದು ಶಾಂತಿಗೆ ಹೆಸರುವಾಸಿಯಾಗಿರುವ ಜಿಲ್ಲೆಯನ್ನು ಕೋಮುಗಲಭೆ ಸೃಷ್ಟಿಸಿ ತಮ್ಮ ಮತಗಳನ್ನು ಭದ್ರಪಡಿಸುವ ಹುನ್ನಾರ ಇದಾಗಿದೆ.
ಚುನಾವಣಾ ಸಂದರ್ಭದಲ್ಲಿ ಹುಸಿ ದೇಶಭಕ್ತಿ ತೋರುವ ಬಿಜೆಪಿಯ ಈ ನಡೆಯನ್ನು ಖಂಡನಾರ್ಹವಾಗಿದ್ದು ಇದಕ್ಕೆ ಸಾಥ್ ನೀಡುತ್ತಿರುವ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಆಡಳಿತ ಪಕ್ಷದ ಕೈಗೊಂಬೆಯಾಗಿದ್ದು ಇಂತಹ ಅಹಿತಕರ ಘಟನೆಯನ್ನು ಕೊನೆಗೊಳಿಸುವುದು ಬಿಟ್ಟು ಅಶಾಂತಿ ಸೃಷ್ಟಿಸುವವರ ಗೆ ಬೆಂಬಲವನ್ನು ನೀಡಿ ಆಡಳಿತ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ಜಿಲ್ಲೆಯಲ್ಲಿ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.