ಬೆಂಗಳೂರು : ಸಿಎಂ ಯಡಿಯೂರಪ್ಪ ಈ ಹಿಂದೆ ತಿಳಿಸಿದ್ದಂತೆ, ಇಂದು ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಗೋ ಹತ್ಯೆ ನಿಷೇಧ ವಿದೇಯಕ ಮಂಡಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ವಿರೋಧದ ನಡುವೆಯೂ ಮಸೂದೆ ಮಂಡನೆಯಾಗಿದೆ.
ಪಶು ಸಂಗೋಪನಾ ಸಚಿವರು ಮಸೂದೆ ಮಂಡನೆಗೆ ಮುಂದಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸಚಿವರು ಮಸೂದೆ ಮಂಡಿಸಿದರು.
ಪ್ರತಿಭಟನೆಯ ನಡುವೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ನಾಳೆ ಹೊಸ ಬಿಲ್ ಗಳನ್ನು ಪಾಸ್ ಮಾಡಿಕೊಡೋದಿಲ್ಲ ಎಂಬುದಾಗಿ ಹೇಳಿದ್ವಿ. ಹೊಸ ಬಿಲ್ ಗಳನ್ನು ಹೊರತಾಗಿ ಬೇರೆ ಬಿಲ್ ಗಳನ್ನು ತಿದ್ದುಪಡಿ ಮಾಡಿಕೊಡುತ್ತೇವೆ ಎಂಬುದಾಗಿ ತಿಳಿಸಿದ್ವಿ. ಗೋ ಹತ್ಯೆ ನಿಷೇಧ ವಿದೇಯಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು.
ಉಭಯ ಸದನಗಳಲ್ಲಿ ಮಸೂದೆ ಮಂಜೂರಾತಿ ಪಡೆದು, ಕಾನೂನು ರೂಪ ಪಡೆದುಕೊಳ್ಳುತ್ತಾ ಕಾದು ನೋಡಬೇಕು.