ಮಲೆನಾಡಿನಲ್ಲಿ ಹುಲಿ ದಾಳಿಗೆ ಹಸು ಬಲಿ

Prasthutha|

ಚಿಕ್ಕಮಗಳೂರು: ಹುಲಿಯೊಂದು  ಹಸುವನ್ನು ಕೊಂದು ಹಾಕಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ದೇವರುಮನೆ ಹೋಗುವ ದಾರಿಯಲ್ಲಿ ನಡೆದಿದೆ

- Advertisement -

ಮೂಡಿಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ವಾರಕ್ಕೊಂದು ಹಸುವಿನ ಮೇಲೆ ಹುಲಿ ದಾಳಿ ನಡೆಯುತ್ತಿದೆ.ಒಂದೆಡೆ ಕಾಡಾನೆಗಳ ಉಪಟಳದಿಂದ ರೈತರು ಬೆಳೆದ ಬೆಳೆ ನಷ್ಟವಾದರೆ ಇನ್ನೊಂದೆಡೆ ಕೃಷಿ ಕಾರ್ಯ ನಿರ್ವಹಿಸುವ ರೈತರು ಹುಲಿ ದಾಳಿಯಿಂದಾಗಿ ತೀವ್ರ ಆತಂಕದಲ್ಲಿ ದಿನ ದೂಡುವಂತಾಗಿದೆ.

ಸ್ಥಳಕ್ಕೆ ಅರಣ್ಯ ರಕ್ಷಕರಾದ ಅಭಿಜಿತ್ ಮತ್ತು ಮಂಜುನಾಥ್ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.



Join Whatsapp