ಜುಲೈನಲ್ಲಿ ಮಕ್ಕಳಿಗಾಗಿ ಸೀರಮ್‌ ಇನ್ಸ್‌ ಟಿಟ್ಯೂಟ್‌ ನ ಕೊವೊವ್ಯಾಕ್ಸ್‌ ಲಸಿಕೆ ಸಿದ್ಧ

Prasthutha: June 18, 2021

ನವದೆಹಲಿ : ಕೋವಿಡ್‌ ಲಸಿಕೆ ನೊವಾವ್ಯಾಕ್ಸ್‌ ಅನ್ನು ಸಿದ್ಧ ಪಡಿಸುತ್ತಿರುವ ಸೀರಂ ಇನ್ಸ್‌ ಟಿಟ್ಯೂಟ್‌ ಆಫ್‌ ಇಂಡಿಯಾ ಮುಂದಿನ ತಿಂಗಳು ಮಕ್ಕಳಿಗೆ ಲಸಿಕೆ ನೀಡುವಿಕೆ ಯೋಜನೆ ಹೊಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ. ಕೊವೊವ್ಯಾಕ್ಸ್‌ ಎಂಬ ಲಸಿಕೆ ಮಕ್ಕಳಿಗೆ ನೀಡಲು ಸಂಸ್ಥೆ ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

ಅಮೆರಿಕ ಮೂಲದ ನೊವೊವ್ಯಾಕ್ಸ್‌ ತನ್ನ ಕೋವಿಡ್‌ ಲಸಿಕೆಯು ಶೇ.90ಕ್ಕೂ ಹೆಚ್ಚು ಪರಿಣಾಮಕಾರಿಯಾಗಿದೆ. ಅಮೆರಿಕ ಮತ್ತು ಮೆಕ್ಸಿಕೊದಲ್ಲಿ ಇದು ಸ್ಪಷ್ಟವಾಗಿದೆ. ಭಾರತದಲ್ಲಿ ಈ ಲಸಿಕೆ ನೀಡಲು ಮಾರ್ಚ್‌ ನಿಂದ ಆರಂಭವಾಗಿದೆ ಎಂದು ಸಂಸ್ಥೆ ಹೇಳಿದೆ.

ನೊವಾವ್ಯಾಕ್ಸ್‌ ತುಂಬಾ ಅದ್ಭುತವಾಗಿದೆ. ಇದು ತುಂಬಾ ಸರಳ ಮತ್ತು ಕಡಿಮೆ ಬೆಲೆಯದ್ದು, ಅಲ್ಲದೆ ಶೇ.90ರಷ್ಟು ಪರಿಣಾಮಕಾರಿಯಾದುದು ಎಂದು ಕೋವಿಡ್‌ ಕಾರ್ಯನಿರ್ವಹಣಾ ಸಮೂಹ ಕೇಂದ್ರದ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ