ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊರೋನ ವೈರಸ್ ಲಸಿಕೆಯಾಗಿರುವ ಕೋವಿಶೀಲ್ಡ್ ಅನ್ನು “ಅಸುರಕ್ಷಿತ” ಎಂದು ಘೋಷಿಸುವಂತೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಚೆನ್ನೈ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೋವಿಡ್ ಲಸಿಕೆ ಪ್ರಯೋಗದ ಮೂರನೇ ಹಂತದ ಸ್ವಯಂಸೇವಕರಾಗಿದ್ದ ಚೆನ್ನೈನ 41ರ ಹರೆಯದ ವ್ಯಕ್ತಿಯೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಕ್ಟೋಬರ್ 1ರಂದು ಡೋಸೇಜ್ ನೀಡಲಾಗಿದ್ದು, ಲಸಿಕೆ ಪ್ರಯೋಗದಿಂದ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತಿದ್ದೇನೆ ಎಂದು ಆರೋಪಿಸಿ ಅವರು ರೂ.5 ಕೋಟಿ ಪರಿಹಾರವನ್ನೂ ಕೇಳಿದ್ದಾರೆ.
ತುರ್ತು ಬಳಕೆಗಾಗಿ ಕಳೆದ ತಿಂಗಳು ಭಾರತದ ಔಷಧ ನಿಯಂತ್ರಕ ಡಿಸಿಜಿಐ ಬಿಡುಗಡೆಗೊಳಿಸಿದ ಎರಡು ಲಸಿಕೆಗಳಲ್ಲಿ ಕೋವಿಶೀಲ್ಡ್ ಒಂದಾಗಿದೆ. ಇನ್ನೊಂದು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್. ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಜನವರಿ 16ರಿಂದ ದೇಶಾದ್ಯಂತ 1 ಕೋಟಿಗೂ ಹೆಚ್ಚು ಪ್ರಮಾಣದ ಲಸಿಕೆಗಳನ್ನು ನೀಡಲಾಗಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಇದು ಕಂಪೆನಿಯನ್ನು ಅಪಚಾರಗೊಳಿಸುವ ತಂತ್ರ ಎಂದಷ್ಟೇ ಪ್ರತಿಕ್ರಿಯಿಸಿದೆ.