ಉತ್ತರಪ್ರದೇಶಕ್ಕೂ ವ್ಯಾಪಿಸಿದ ನಕಲಿ ಕೋವಿಡ್ ಲಸಿಕೆ ಪ್ರಮಾಣಪತ್ರ!

Prasthutha|

ಪಟ್ಟಿಯಲ್ಲಿ ಅಮಿತ್ ಶಾ, ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ಹೆಸರು!

- Advertisement -

ಲಕ್ನೋ: ಉತ್ತರಪ್ರದೆಶದ ಕೋವಿಡ್ ಲಸಿಕೆ ಪಡೆದವರ ಪಟ್ಟಿಯಲ್ಲಿ ದೊಡ್ಡ ದೋಷ ಕಂಡುಬಂದಿದ್ದು, ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರ ಹೆಸರನ್ನು ಲಸಿಕೆ ಪಡೆದವರ ಪಟ್ಟಿಗೆ ಸೇರಿಸಲಾಗಿದೆ.

ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಪುಷ್ಯು ಗೋಯೆಲ್ ಅವರ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ನೀಡಲಾಗಿದ್ದು, ಎಡ್ವಾ ಜಿಲ್ಲೆಯ ಥಾಖಾ ಆರೋಗ್ಯ ಕೇಂದ್ರದಿಂದ ಲಸಿಕೆ ಸ್ವೀಕರಿಸಲಾಗಿದೆ ಎಂದು ಪ್ರಮಾಣಪತ್ರವನ್ನು ನೀಡಲಾಗಿದೆ.

- Advertisement -

ಮುಖ್ಯ ವೈದ್ಯಾಧಿಕಾರಿ ಘಟನೆಯ ಕುರಿತು ತನಿಖೆಯನ್ನು ಘೋಷಿಸಿದ್ದಾರೆ. ಡಿಸೆಂಬರ್ 12 ರಂದು ಮೊದಲ ಡೋಸ್ ಲಸಿಕೆಯನ್ನು ಸ್ವೀಕರಿಸಲಾಗಿದೆ. ಎರಡನೇ ಡೋಸ್ ಅನ್ನು 2022 ರ ಮಾರ್ಚ್ 5 ಮತ್ತು ಏಪ್ರಿಲ್ 3ರ ನಡುವೆ ಸ್ವೀಕರಿಸಬೇಕೆಂದು ಪ್ರಮಾಣಪತ್ರದಲ್ಲಿ ಉಲ್ಲೆಖಿಸಲಾಗಿದೆ.

ಈ ನಡುವೆ ಡಿಸೆಂಬರ್ 12 ರಂದು ತಮ್ಮ ಐಡಿ ಹೊಂದಿರುವ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಗ್ಯ ಕೇಂದ್ರದ ಅಧಿಕಾರಿಗಳು ಆರೋಪಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಚಲನಚಿತ್ರ ತಾರೆಯರಾದ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಬಿಹಾರದಲ್ಲಿ ಲಸಿಕೆ ಪಡೆದವರ ಪಟ್ಟಿಗೆ ಸೇರಿಸಲಾಗಿತ್ತು.

Join Whatsapp