ಮೇಘಾಲಯ: ಲಸಿಕೆ ಹಾಕದಿರುವವರಿಗೆ ಪ್ರತಿ ಹತ್ತು ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್

Prasthutha|

ಮೇಘಾಲಯ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಅಂಗಡಿಗಳು, ಸಂಸ್ಥೆಗಳು ಮತ್ತು ವಾಹನಗಳ ನೌಕರರು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಪ್ರತಿ ಹತ್ತು ದಿನಗಳಿಗೊಮ್ಮೆ  ಕೋವಿಡ್ ಪರೀಕ್ಷೆಗೊಳಪಡಬೇಕೆಂದು ಮೇಘಾಲಯ ಜಿಲ್ಲಾಡಳಿತ ಆದೇಶಿಸಿದೆ.

- Advertisement -

‘ಲಸಿಕೆ ಪಡೆಯದ ಅಂಗಡಿಗಳು / ಸಂಸ್ಥೆಗಳ ಸಿಬ್ಬಂದಿಗಳು ಮತ್ತು ಸ್ಥಳೀಯ ಟ್ಯಾಕ್ಸಿಗಳು, ಆಟೋರಿಕ್ಷಾಗಳು, ಮ್ಯಾಕ್ಸಿ ಕ್ಯಾಬ್‌ಗಳು ಬಸ್‌ಗಳ ಚಾಲಕರು, ಕಂಡಕ್ಟರ್‌ಗಳು ಮತ್ತು ಸಹಾಯಕರು ಪ್ರತಿ ಹತ್ತು ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಗೊಳಪಡಬೇಕು. ಈ ಸುರಕ್ಷತಾ ಕ್ರಮವನ್ನು ನಿರ್ವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಸಮಾಜದ ಸುರಕ್ಷತೆಗೆ ಸಹಕರಿಸಿ ‘ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲಾಧಿಕಾರಿ ಇಸವಾಂಡಾ ಲಾಲೂ ಅವರು ಆದೇಶ ಹೊರಡಿಸಿದ್ದಾರೆ. 

ನ್ಯಾಯಾಲಯದ ಆದೇಶದಂತೆ, ಪೂರ್ವ ಖಾಸಿ ಹಿಲ್ಸ್ ಆಡಳಿತವು ಎಲ್ಲಾ ಅಂಗಡಿಗಳು, ಸಂಸ್ಥೆಗಳು ಮತ್ತು ಪ್ರಯಾಣಿಕರ ವಾಹನಗಳ ಸಿಬ್ಬಂದಿಗಳು ವ್ಯಾಕ್ಸಿನೇಷನ್ ಬಗ್ಗೆ ಸೂಚಿಸಲು ‘ಲಸಿಕೆ ಹಾಕಿದ’ ಅಥವಾ ‘ಲಸಿಕೆ ಹಾಕದ’ ಕುರಿತ ಚಿಹ್ನೆಯನ್ನು ಸಾರ್ವಜನಿಕವಾಗಿ ಕಾಣುವಂತೆ ಪ್ರದರ್ಶಿಸಲು ನಿರ್ದೇಶಿಸಿದೆ.



Join Whatsapp