ಕೋವಿಡ್ ಪರೋಲ್| ಮುಂದಿನ ಸೂಚನೆ ಬರುವವರೆಗೂ ಖೈದಿಗಳು ಮರಳಬೇಡಿ: ಸುಪ್ರೀಂ ಕೋರ್ಟ್

Prasthutha|

ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ಪರೋಲ್ ಮೇಲೆ ಬಿಡುಗಡೆಯಾದ ಖೈದಿಗಳು ಮುಂದಿನ ಆದೇಶ ಬರುವವರೆಗೂ ಜೈಲಿಗೆ ಮರಳಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

- Advertisement -

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ, ಪ್ರಸ್ತುತ ಪರೋಲ್‌ನಲ್ಲಿರುವವರನ್ನು ಮುಂದಿನ ಆದೇಶದವರೆಗೆ ಜೈಲಿಗೆ ಮರಳುವಂತೆ ಒತ್ತಾಯ ಮಾಡಬಾರದು ಎಂದು ನಿರ್ದೇಶಿಸಿದೆ. ಖೈದಿಗಳಿಗೆ ಪರೋಲ್ ನೀಡಿರುವ ಕುರಿತು ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ಕೇಳಿದೆ.

ಅನೇಕ ರಾಜ್ಯಗಳು ಖೈದಿಗಳಿಗೆ ವಿವಿಧ ಮಾನದಂಡಗಳ ಮೇಲೆ ಪರೋಲ್ ನೀಡಿವೆ. ಈ ನಿಟ್ಟಿನಲ್ಲಿ ಪರೋಲ್ ನೀಡಿರುವ ಬಗ್ಗೆ ಪರಿಶೀಲಿಸಲು ವಿವರಗಳನ್ನು ಐದು ದಿನಗಳಲ್ಲಿ ಹಸ್ತಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.



Join Whatsapp