ಕೋವಿಡ್ ಹೊಸ ತಳಿಗೆ ‘ಒಮಿಕ್ರಾನ್’ ನಾಮಕರಣ | ತೀವ್ರ ಆತಂಕಕಾರಿ ಎಂದ WHO

Prasthutha|

ಜಿನೇವಾ: ಆಫ್ರಿಕಾದ ದಕ್ಷಿಣ ಭಾಗದಲ್ಲಿ ಪತ್ತೆಯಾಗಿರುವ B.1.1.529 ಕೋವಿಡ್ ತಳಿಗೆ ಒಮಿಕ್ರಾನ್ ಎಂದು ನಾಮಕರಣ ಮಾಲಾಗಿದ್ದು, ಈ ರೂಪಾಂತರಿಯು ತೀವ್ರ ಕಳವಳಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

- Advertisement -

ಕೋವಿಡ್ 19 ಸೋಂಕಿನ ಇತರೆ ಆಲ್ಫಾ, ಬೀಟಾ ಮತ್ತು ಗಾಮಾ ವೈರಸ್‌ಗಳಿಗಿಂತ ಬಹಳ ಅಪಾಯಕಾರಿ ಎಂಬ ವರ್ಗಕ್ಕೆ ಒಮಿಕ್ರಾನ್ ಅನ್ನು ಸೇರ್ಪಡೆ ಮಾಡಲಾಗಿದೆ ಎಂದು WHO ಹೇಳಿದೆ. ಹೊಸ ರುಪಾಂತರಿಯಿಂದ ರಕ್ಷಿಸಿಕೊಳ್ಳಲು ಬಹುತೇಕ ದೇಶಗಳು ವಿಮಾನ ಸಂಚಾರದ ನಿಷೇಧಕ್ಕೆ ಮುಂದಾಗಿದ್ದು, ಚೇತರಿಕೆ ಹಾದಿಯಲ್ಲಿದ್ದ ಜಾಗತಿಕ ಆರ್ಥಿಕತೆಯ ಮೇಲೆ ಕೋವಿಡ್ ವೈರಸ್‌ನ ಕರಾಳ ಛಾಯೆ ಮತ್ತೊಮ್ಮೆ ಆವರಿಸಿದೆ.

ಕೋವಿಡ್ ಲಸಿಕೆಗಳಲ್ಲಿನ ಜಟಿಲತೆಗಳು, ಪರೀಕ್ಷೆ ಮತ್ತು ಚಿಕಿತ್ಸೆಗಳಲ್ಲಿ ಯಾವುದಾದರೂ ಬದಲಾವಣೆ ಇರಲಿದೆಯೇ ಎಂಬ ಕುರಿತಾದ ಅಧ್ಯಯನಗಳನ್ನು ಪೂರ್ಣಗೊಳಿಸಲು ಇನ್ನೂ ಕೆಲವು ತಿಂಗಳು ಕಾಯಲೇ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

- Advertisement -

ದಕ್ಷಿಣ ಆಫ್ರಿಕಾದಲ್ಲಿ ಬುಧವಾರ ಮೊದಲ ಬಾರಿಗೆ ಈ ಹೊಸ ತಳಿ ಕುರಿತು ವರದಿಯಾಗಿದೆ. ನವೆಂಬರ್ 9ರಂದು ಸಂಗ್ರಹಿಸಿದ ಮಾದರಿಯಲ್ಲಿ ಈ ವಿಭಿನ್ನ ತಳಿ ಕಂಡುಬಂದಿತ್ತು. ಈ ಹೊಸ ತಳಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಹಾಗೂ ಆಫ್ರಿಕಾದ ದಕ್ಷಿಣ ಭಾಗದಲ್ಲಿ ಹೊಸ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಗೊಂಡಿದೆ.



Join Whatsapp