ಕೋವಿಡ್ ಸೋಂಕು ಹೆಚ್ಚಳ| ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Prasthutha|

ಟೋಕಿಯೊ: ಕೋವಿಡ್ ಸೋಂಕಿನ ತೀವ್ರ ಹೆಚ್ಚಳದಿಂದಾಗಿ ಜಪಾನ್ ಸರ್ಕಾರ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಒಲಿಂಪಿಕ್ಸ್‌ ಆರಂಭಕ್ಕೆ ಎರಡೇ ವಾರಗಳು ಉಳಿದಿರುವ ಹಿನ್ನೆಲೆಯಲ್ಲಿ ಜಪಾನ್‌ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. 

- Advertisement -

ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭ ಜುಲೈ 23ರಂದು ನಡೆಯಲಿದ್ದು, ಕ್ರೀಡೆಗಳ ವೇಳೆಯೂ ನಿರ್ಬಂಧ ಕ್ರಮಗಳು ಮುಂದುವರಿಯಲಿದೆ. ರಾಜಧಾನಿಯಲ್ಲಿ ಅಪಾಯಕಾರಿಯಾಗಿರುವ ಡೆಲ್ಟಾ ರೂಪಾಂತರ ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇತಿಹಾಸದಲ್ಲೇ ಮೊಟ್ಟಮೊದಲ ಬಾರಿ ಖಾಲಿ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡೆಗಳು ನಡೆಯುವ ತಾಣಗಳಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ.

- Advertisement -

ಆಗಸ್ಟ್ 22ರವರೆಗೆ ಜಾರಿಯಲ್ಲಿರುವ ಹೊಸ ನಿರ್ಬಂಧಗಳ ಪ್ರಕಾರ ಬಾರ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ರಾತ್ರಿ 8 ಗಂಟೆಯೊಳಗೆ ಬಾರ್‌ಗಳನ್ನು ಬಂದ್‌ ಮಾಡಬೇಕಾಗುತ್ತದೆ. ಸಂಗೀತ ಕಛೇರಿ, ಸಭೆ, ಸಮ್ಮೇಳನಗಳು 9 ಗಂಟೆ ನಂತರ ನಡೆಸಲು ಅನುಮತಿಯಿಲ್ಲ.

ಒಲಿಂಪಿಕ್‌ ಕ್ರೀಡೆಗಳಿಗೆ ಬರುವ ಸ್ಪರ್ಧಿಗಳು ಪೂರ್ಣ 14 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಿಲ್ಲ. ಆದರೆ ಜಪಾನ್‌ನಲ್ಲಿ ಇರುವವರೆಗೆ ನಿರ್ಬಂಧಗಳಿಗೆ ಒಳಗಾಗಬೇಕಾಗುತ್ತದೆ. ಅಥ್ಲೀಟುಗಳು ಒಲಿಂಪಿಕ್ ಗ್ರಾಮ ಮತ್ತು ಸ್ಪರ್ಧಾ ತಾಣಗಳಿಗೆ ಸೀಮಿತಗೊಳ್ಳಬೇಕಾಗುತ್ತದೆ. ಮಾತ್ರವಲ್ಲ, ನಿತ್ಯ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.



Join Whatsapp