ವಿಯೆನ್ನಾ: ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಆಸ್ಟ್ರಿಯಾದಲ್ಲಿ ಸೋಮವಾರದಿಂದ ಕೋವಿಡ್ ಲಾಕ್ ಡೌನ್ ಜಾರಿಗೊಳಿಸುವುದಾಗಿ ಪ್ರಧಾನಿ ಅಲೆಕ್ಸಾಂಡರ್ ಶಲ್ಲೆನ್‌ಬರ್ಗ್ ಘೋಷಿಸಿದ್ದಾರೆ.
ಆಸ್ಟ್ರಿಯಾದಲ್ಲಿ 15,145 ಪ್ರಕರಣಗಳು ದಾಖಲಾಗಿವೆ. ಕಳೆದ ಏಳು ದಿನಗಳಲ್ಲಿ 12,616 ಪ್ರಕರಣಗಳು ಕಂಡುಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಘೋಷಿಸಲಾಗಿದೆ.
ಕೆಲವು ದಿನಗಳ ಹಿಂದೆಯೇ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ನಿರ್ಧರಿಸಿರುವುದಾಗಿ ಹೇಳಲಾಗಿತ್ತಾದರೂ, ಕೇವಲ ಲಸಿಕೆ ಪಡೆಯದವರಿಗಷ್ಟೇ ನಿರ್ಬಂಧಗಳಿರುತ್ತವೆ ಎಂದು ತಿಳಿಸಲಾಗಿತ್ತು. ಆದರೀಗ, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಲಾಕ್ ಡೌನ್ ನಿಯಮಗಳು ಅನ್ವಯವಾಗುತ್ತವೆ ಎಂದು ಅಲ್ಲಿನ ಪ್ರಧಾನಿ ತಿಳಿಸಿದ್ದಾರೆ.