ಮಂಡ್ಯ : ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಪತಿಯೂ ಸಾವು

Prasthutha|

ಮಂಡ್ಯ,ಮೇ.22 : ಪತ್ನಿಯ ಸಾವಿನ ಸುದ್ದಿ ಕೇಳಿದ ಕೊರೊನಾ ಸೋಂಕಿತ ಪತಿ ಕೂಡ ಆಘಾತಗೊಂಡು ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ತಾಲೂಕಿನಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದ ಜಿಲ್ಲಾ ರೈತ ಸಂಘದ ಹಿರಿಯ ಮುಖಂಡ ಸಿ.ಚಾಮುಂಡಪ್ಪ (74) ಹಾಗೂ ಇವರ ಪತ್ನಿ ಜಯಮ್ಮ (62) ಮೃತಪಟ್ಟವರು,ಪತ್ನಿ, ಪತ್ನಿ ಸಾವಿನಲ್ಲೂ ಒಂದಾಗಿದ್ದಾರೆ.

ಪತ್ನಿ ಮೃತರಾದ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟಿದ್ದಾರೆ. ಜಯಮ್ಮ ಅವರು ನಿನ್ನೆ ಬೆಳಿಗ್ಗೆ  ಅನಾರೋಗ್ಯದಿಂದ ಮೃತಪಟ್ಟಿದ್ದರು. ಸಂಜೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಮಾರನೇ ದಿನ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತಿ ಹಾಗೂ ರೈತ ಸಂಘದ ಹಿರಿಯ ಮುಖಂಡ ಸಿ.ಚಾಮುಂಡಪ್ಪ ನಿಧನರಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದು ಕುಟುಂಬದವರ ರೋಧನ ಮುಗಿಲುಮುಟ್ಟಿದೆ.

- Advertisement -