ಮಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 2 ಶಾಲೆಗಳನ್ನು ಬಂದ್ ಮಾಡಲಾಗಿದೆ.
ಮಂಗಳೂರು ಉತ್ತರದ ಸೈಂಟ್ ಲಾರೆನ್ಸ್ ಪ್ರೌಢ ಶಾಲೆ ಬೋಂದೆಲ್, ಸೈಂಟ್ ಲಾರೆನ್ಸ್ ಹಿ.ಪ್ರಾ. ಶಾಲೆಯನ್ನು ಮುನ್ನೆಚ್ಚರಿಕೆಗಾಗಿ ಮುಚ್ಚಲಾಗಿದ್ದು, ಆ ಶಾಲೆಗಳಲ್ಲಿ ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಐದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಶಾಲೆಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಒಂದು ವಾರದ ಕಾಲ ಬಂದ್ ಮಾಡಬೇಕೆಂದು ಆದೇಶಿಸಿದ್ದರು. ಇದೀಗ ನಗರದ ಕೆಲವೊಂದು ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅಂತಹಾ ಶಾಲೆಗಳನ್ನು ಒಂದು ವಾರದ ಕಾಲಾವಧಿಗೆ ಸ್ಥಗಿತಗೊಳಿಸಲಾಗಿದೆ.