ಚಂಡೀಗಢ : ಈಗಾಗಲೇ ಪ್ರಯೋಗಾರ್ಥ ಕೊರೊನ ಲಸಿಕೆ ಹಾಕಿಸಿಕೊಂಡಿದ್ದ ಹರ್ಯಾಣ ಸಚಿವರಿಗೇ ಕೊರೊನ ಪಾಸಿಟಿವ್ ವರದಿ ಬಂದಿದೆ. ಹರ್ಯಾಣದ ಸಚಿವ ಅನಿಲ್ ವಿಜ್ ಅವರಿಗೆ ಕೊರೊನ ಸೋಂಕು ದೃಢಪಟ್ಟಿದ್ದು, ಈ ಕುರಿತಂತೆ ಅವರೇ ಸ್ವತಃ ಟ್ವೀಟ್ ಮಾಹಿತಿ ನೀಡಿದ್ದಾರೆ.
ಕಳೆದ ನ.20ರಂದು ಕೋವ್ಯಾಕ್ಸಿನ್ ಕೊರೊನ ಲಸಿಕೆಯ 3ನೇ ಹಂತದ ಪರೀಕ್ಷೆಯಲ್ಲಿ ಸಚಿವ ಅನಿಲ್ ವಿಜ್ ಸ್ವತಃ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹರ್ಯಾಣದ ಅಂಬಾಲದಲ್ಲಿ ನಡೆದಿದ್ದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಲಸಿಕೆಯ ಒಂದು ಡೋಸ್ ಅನ್ನು ಹಾಕಿಸಿಕೊಳ್ಳುವ ಮೂಲಕ ಪ್ರಯೋಗಕ್ಕೆ ಒಳಪಟ್ಟಿದ್ದರು.
ಕೋವ್ಯಾಕ್ಸಿನ್ ಅನ್ನು ಹಾಕಿಸಿಕೊಳ್ಳುವ ಮೂಲಕ ಪ್ರಯೋಗಕ್ಕೆ ಒಳಪಟ್ಟಿದ್ದರು. ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದಲ್ಲಿ ಈ ಲಸಿಕೆಯನ್ನು ಸುಮಾರು 26,000 ಜನರ ಮೇಲೆ ಪ್ರಯೋಗಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿತ್ತು.