ಮುಂದಿನ ವಾರವೇ ಕೋವಿಡ್ 19 ಲಸಿಕೆ ನೀಡಿಕೆ ಆರಂಭ : ಆರೋಗ್ಯ ಕಾರ್ಯದರ್ಶಿ

Prasthutha|

ನವದೆಹಲಿ : ಕೋವಿಡ್ 19 ಲಸಿಕೆ ದೇಶದಲ್ಲಿ ಮುಂದಿನ ವಾರದಿಂದಲೇ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ದೇಶದ ಔಷಧ ನಿಯಂತ್ರಣ ಮಂಡಳಿ ತುರ್ತು ಬಳಕೆಗೆ ಅನುಮತಿ ನೀಡಿದ ಹತ್ತು ದಿನಗಳೊಳಗಾಗಿ ಸಾರ್ವಜನಿಕರ ಬಳಕೆಗೆ ಲಸಿಕೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಲಸಿಕೆಗೆ ಈಗಾಗಲೇ ಜ.3ರಂದು ಅನುಮತಿ ನೀಡಲಾಗಿದೆ.

- Advertisement -

ಕೋವಿಡ್ 19 ಸೋಂಕಿನ ವಿರುದ್ಧದ ಲಸಿಕೆಗೆ ದೇಶವೇ ಕಾಯುತ್ತಿದ್ದು, ಸರಕಾರ ಇದೇ ಮೊದಲ ಬಾರಿ ಅಧಿಕೃತವಾಗಿ ಲಸಿಕೆ ನೀಡುವ ದಿನದ ಬಗ್ಗೆ ಪ್ರಸ್ತಾಪಿಸಿದೆ. ಆಕ್ಸ್ ಫರ್ಡ್ ವಿವಿ ಮತ್ತು ಆಸ್ಟ್ರಾ ಝೆನೆಕಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಗಾಗಿ ಪುಣೆ ಮೂಲದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಅನುಮತಿ ನೀಡಿತ್ತು. ಅಂತೆಯೇ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದ ಕೋವ್ಯಾಕ್ಸಿನ್ ಲಸಿಕೆಗಳನ್ನು ನಿರ್ಬಂಧಿತವಾಗಿ ತುರ್ತು ಸಂದರ್ಭಗಳಲ್ಲಿ ಬಳಸಲು ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿತ್ತು.  

Join Whatsapp