ಸೆಪ್ಟೆಂಬರ್ ನಿಂದ 2 ರಿಂದ 18ವರ್ಷದವರೆಗಿನ ಮಕ್ಕಳಿಗೂ ಕೋವಿಡ್ 19 ಲಸಿಕೆ: ಪ್ರಿಯಾ ಅಬ್ರಾಹಂ

Prasthutha|

ನವದೆಹಲಿ: ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ನಿಂದ 2-18ವರ್ಷದವರೆಗಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಪುಣೆ) ನಿರ್ದೇಶಕಿ ಪ್ರಿಯಾ ಅಬ್ರಾಹಂ ಹೇಳಿದ್ದಾರೆ.

- Advertisement -

ಮಕ್ಕಳಿಗೆ ಕೋವಿಡ್ 19 ಲಸಿಕೆ ನೀಡುವ ಸಂಬಂಧ ಸದ್ಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದ್ದು, ಅದು ಸಂಪೂರ್ಣಗೊಂಡ ನಂತರ ಸೆಪ್ಟೆಂಬರ್ ನಿಂದ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ಪ್ರಿಯಾ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶ ಶೀಘ್ರವೇ ಬರುತ್ತದೆ ಎಂಬ ಆಶಯವಿದೆ. ಆ ಫಲಿತಾಂಶವನ್ನು ರೆಗ್ಯೂಲೇಟರ್ಸ್ ಗಳಿಗೆ ನೀಡಲಾಗುವುದು. ಸೆಪ್ಟೆಂಬರ್ ಅಥವಾ ಸೆಪ್ಟೆಂಬರ್ ನಂತರ ಮಕ್ಕಳಿಗೆ ಖಂಡಿತವಾಗಿ ವ್ಯಾಕ್ಸಿನ್ ಸಿಗುತ್ತದೆ. ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಕೂಡ ಸೆಪ್ಟೆಂಬರ್ ಅಷ್ಟೊತ್ತಿಗೆ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದರು.

Join Whatsapp