ಪಾಟ್ನಾ: ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯಕ್ರಿಯೆ ನಡೆಸಲು ಆಸ್ಪತ್ರೆಯಿಂದ ಸ್ಮಶಾನಕ್ಕೆ ನಗರಸಭೆಗೆ ಸೇರಿದ ಕಸದ ಗಾಡಿಯಲ್ಲಿ ಸಾಗಿಸಿದ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ.
ನಗರಸಭೆಯ ಕಸದ ಗಾಡಿಯಲ್ಲಿ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಗಳು ಕೊರೋನಾ ಸೋಂಕಿತನ ಮೃತ ದೇಹ ಸಾಗಿಸುತ್ತಿರುವ ವೀಡಿಯೋ ವ್ಯಾಪಕ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಇನ್ನೂರಕ್ಕೂ ಅಧಿಕ ವಾಹನಗಳಿವೆ. ಆದರೆ ಮೃತ ದೇಹವನ್ನು ಯಾಕೆ ಕಸದ ಗಾಡಿಯಲ್ಲಿ ಸಾಗಿಸಲಾಯಿತು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.