ಹೊಸದಿಲ್ಲಿ: ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ದೆಹಲಿ ಸರ್ಕಾರದ ನಿರ್ಧಾರ ‘ಅಸಂಬದ್ಧ’ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಸ್ವಂತ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕು ಎಂದು ಹೇಳುವುದು ಅಸಂಬದ್ಧವಾಗಿದೆ ಎಂದು ನ್ಯಾಯಮೂರ್ತಿ ವಿಪಿನ್ ಸ್ಯಾಂಕಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.
ಆದೇಶವು ಅನಗತ್ಯವಾಗಿದ್ದರೆ ಸರ್ಕಾರವೇ ಅಂತಹ ನಿರ್ಬಂಧಗಳನ್ನು ಹಿಂಪಡೆಯಬಹುದಲ್ಲವೇ ಎಂದು ನ್ಯಾಯಾಲಯ ಈ ವೇಳೆ ಸರ್ಕಾರಕ್ಕೆ ಕೇಳಿದೆ.