ಮುಂಬೈಯಲ್ಲಿ ಮತ್ತೆ ಕೋವಿಡ್ 19 ಹೆಚ್ಚಳ | 120 ಕಟ್ಟಡಗಳು ಸೀಲ್ ಡೌನ್

Prasthutha|

ನವದೆಹಲಿ : ಮುಂಬೈನಲ್ಲಿ ದಿನನಿತ್ಯ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಆತಂಕ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಫೆಬ್ರವರಿ 22ರಿಂದ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕೋವಿಡ್ 19 ಸಂಬಂಧಿತ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

- Advertisement -

ಕೋವಿಡ್ 19 ಮಾನದಂಡವನ್ನು ಮೀರಿ ಸುಮಾರು 300 ಜನರ ಕೂಟಕ್ಕೆ ಅವಕಾಶ ನೀಡಿದಕ್ಕಾಗಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಮೂರು ಮದುವೆ ಸಭಾಂಗಣಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದೆ. ಆ ಸಮಾರಂಭದಲ್ಲಿ ಭಾಗವಹಿಸಿದ ಜನರು ಮಾಸ್ಕ್ ಕೂಡ ಧರಿಸಿರಲಿಲ್ಲ ಎಂದು ಆಪಾದಿಸಲಾಗಿದೆ.

ಐದಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿರುವ ಸರಿಸುಮಾರು 120 ಕಟ್ಟಡಗಳಿಗೆ ಅಧಿಕಾರಿಗಳು ಸೀಲ್ ಹಾಕಿದ್ದಾರೆ. ಭಂಡಪ್, ಪೊವಾಯ್, ಕಾಂಜುರ್ಮಾರ್, ವಿಖ್ರೋಲಿ ಮತ್ತು ನಹೂರ್ ಮುಂತಾದ ಪ್ರದೇಶಗಳಲ್ಲಿ ನಿರಂತರವಾಗಿ ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಅಧಿಕಾರಿಗಳು ಈ ವಲಯಗಳನ್ನು ಹೆಚ್ಚು ಕಣ್ಗಾವಲಿನಲ್ಲಿ ಇಟ್ಟಿದ್ದಾರೆ.



Join Whatsapp