ಭಾರತ್‌ ಬಯೋಟೆಕ್‌ ನ ಕೋವ್ಯಾಕ್ಸಿನ್‌ ಲಸಿಕೆಗೆ ಅಮೆರಿಕದಲ್ಲಿ ಅನುಮತಿ ಇಲ್ಲ

Prasthutha|

ವಾಷಿಂಗ್ಟನ್‌ : ಭಾರತದ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಡ್‌ ವ್ಯಾಕ್ಸಿನ್‌ ʼಕೋವ್ಯಾಕ್ಸಿನ್‌ʼ ಬಳಕೆಗೆ ಅಮೆರಿಕದಲ್ಲಿ ಅನುಮತಿ ನಿರಾಕರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಭಾರತ್‌ ಬಯೋಟೆಕ್‌ ಪರದಾಡುತ್ತಿರುವ ನಡುವೆ, ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

- Advertisement -

ಅಮೆರಿಕದ ಆಹಾರ ಮತ್ತು ಔಷಧ ಆಡಳಿ (ಎಫ್‌ ಡಿಎ) ಈ ನಿರ್ಧಾರ ಕೈಗೊಂಡಿದೆ. ಕೋವ್ಯಾಕ್ಸಿನ್‌ ಬಳಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಎಫ್‌ ಡಿಎ ವರದಿ ತಿಳಿಸಿದೆ. ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಬಯೋಟೆಕ್‌ ಎಫ್ ಡಿಎಗೆ ಪ್ರಸ್ತಾವನೆ ಸಲ್ಲಿಸಿತ್ತು.

ಈಗಾಗಲೇ ಹಲವು ದೇಶಗಳಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡವರಿಗೆ ಬೇರೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಕೋವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಹಂತದ ಕೊನೆಯ ಘಟ್ಟದಲ್ಲಿ ಇದ್ದಾಗಲೇ ಅದರ ತುರ್ತು ಬಳಕೆಗೆ ನಿರ್ಬಂಧಿತ ಅನುಮತಿ ನೀಡಲಾಗಿತ್ತು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಕೋರಿದೆ ಎಂದು ವರದಿಯೊಂದು ತಿಳಿಸಿದೆ.



Join Whatsapp