ಪಿಎಫ್ಐ ವಿರುದ್ಧ ಸುಳ್ಳು ಸುದ್ದಿ: ರಿಪಬ್ಲಿಕ್ ಟಿವಿಗೆ ಸಮನ್ಸ್ ನೀಡಿದ ನ್ಯಾಯಾಲಯ

Prasthutha|

ನವದೆಹಲಿ: ಅಸ್ಸಾಂನಲ್ಲಿ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳನ್ನು ಪಿಎಫ್ಐ ಸದಸ್ಯರು ಮತ್ತು ಹಿಂಸಾಚಾರದ ಹಿಂದೆ ಪಿಎಫ್ ಐ ಕೈವಾಡವಿದೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣ ದಾಖಲಿಸಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ಅಸ್ಸಾಂನಲ್ಲಿ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳನ್ನು ಪಿಎಫ್ಐ ಸದಸ್ಯರು ಮತ್ತು ಹಿಂಸಾಚಾರದ ಹಿಂದೆ ಪಿಎಫ್ ಐ ಕೈವಾಡವಿದೆ ಎಂದು ರಿಪಬ್ಲಿಕ್ ಟಿವಿ ಸುಳ್ಳು ಸುದ್ದಿ ಪ್ರಸಾರ ಮಾಡಿದೆ. ನಾವು ರಿಪಬ್ಲಿಕ್ ಟಿವಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಇಂದು ನ್ಯಾಯಾಲಯ ಅರ್ನಾಬ್ಗೆ ಸಮನ್ಸ್ ಜಾರಿ ಮಾಡಿದೆ. ದ್ವೇಷಕಾರುವವರನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ ಎಂದು ಅವರು ಟ್ವೀಟ್ ನಲ್ಲಿ ಎಚ್ಚರಿಸಿದ್ದಾರೆ.

Join Whatsapp