ನವದೆಹಲಿ: ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಸಂಸದೀಯ ಸವಲತ್ತುಗಳನ್ನೂ ಕಳೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 3 ವರ್ಷ ಸಾಮಾನ್ಯ ಪಾಸ್ ಪೋರ್ಟ್ ಬಳಸಲು ದೆಹಲಿ ಕೋರ್ಟ್ ಅನುಮತಿ ನೀಡಿದೆ.
ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ತಮ್ಮ ಪಾಸ್ ಪೋರ್ಟ್ ಅನ್ನು ಒಪ್ಪಿಸಿದ್ದರು. ನಂತರ ಗಾಂಧಿ ಅವರು ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ (NOC) ಕೋರ್ಟ್ ಸಂಪರ್ಕಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದಾಗ ಅರ್ಜಿಯನ್ನು ಭಾಗಶಃ ಅನುಮತಿಸುವುದಾಗಿ ಕೋರ್ಟ್ ಹೇಳಿದೆ. ಆದ್ರೆ 10 ವರ್ಷಗಳು ಇರುವುದಿಲ್ಲ, ಕೇವಲ 3 ವರ್ಷಗಳ ಕಾಲ ಸಾಮಾನ್ಯ ಪಾಸ್ ಪೋರ್ಟ್ ಬಳಸಬಹುದಾಗಿ ತಿಳಿಸಿದೆ.